ಪುತ್ತೂರಿನಲ್ಲಿ ‘ಸಿಟಿ ಫರ್ನಿಚರ್ ಸೆಂಟರ್’ ಶುಭಾರಂಭ

0

ಮಳಿಗೆ ಅಭಿವೃದ್ಧಿ ಪಥದಲ್ಲಿ ಸಾಗಲಿ-ಕುಂಬೋಳ್ ತಂಙಳ್
ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಕೊಡುಗೆ-ಮಠಂದೂರು

ಪುತ್ತೂರು: ಇಲ್ಲಿನ ದರ್ಬೆ ಬೈಪಾಸ್ ರಸ್ತೆ ಬಳಿಯಿರುವ ಶ್ರೀನಿಧಿ ಕಾಂಪ್ಲೆಕ್ಸ್‌ನಲ್ಲಿ ಫರ್ನಿಚರ್‌ಗಳ ಹೋಲ್‌ಸೆಲ್ ಹಾಗೂ ರಿಟೇಲ್ ಮಾರಾಟ ಮಳಿಗೆ ‘ಸಿಟಿ ಫರ್ನಿಚರ್ ಸೆಂಟರ್’ ಸೆ.18ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಉದ್ಘಾಟಿಸಿ ದುವಾ ನೆರವೇರಿಸಿದ ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ಸಿಟಿ ಫರ್ನಿಚರ್ ಸೆಂಟರ್ ಶುಭಾರಂಭಗೊಂಡಿರುವುದು ಈ ಭಾಗದ ಜನರಿಗೆ ಉಪಯುಕ್ತವಾಗಿದ್ದು ಈ ಮಳಿಗೆ ಜಿಲ್ಲಾ ಕೇಂದ್ರವಾಗುವ ಕನಸು ಕಾಣುತ್ತಿರುವ ಪುತ್ತೂರು ಆದಷ್ಟು ಬೇಗ ಜಿಲ್ಲಾ ಕೇಂದ್ರವಾಗಲಿ ಎಂದು ಆಶಿಸಿದರು.

ಪುತ್ತೂರಿನ ಅಭಿವೃದ್ಧಿಗೆ ಕೊಡುಗೆ-ಮಠಂದೂರು
ಮಳಿಗೆಯ ಎರಡನೇ ವಿಭಾಗವನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಇಲ್ಲಿ ಶುಭಾರಂಭಗೊಂಡಿರುವ ಸಿಟಿ ಫರ್ನಿಚರ್ ಮಳಿಗೆ ಪುತ್ತೂರಿನ ಅಭಿವೃದ್ಧಿಗೆ ಮತ್ತೊಂದು ಕೊಡುಗೆಯಾಗಿದ್ದು ವಿವಿಧ ವಿನ್ಯಾಸಗಳ ಫರ್ನಿಚರ್ ಖರೀದಿಗೆ ದೂರದ ಪ್ರದೇಶಗಳಿಗೆ ಹೋಗುವವರಿಗೆ ಸ್ಥಳೀಯವಾಗಿಯೇ ಉತ್ತಮ ಫರ್ನಿಚರ್‌ಗಳನ್ನು ಖರೀದಿಸಲು ಇದು ಸಹಕಾರಿಯಾಗಲಿದೆ, ಗ್ರಾಹಕರಿಗೆ ಉತ್ತಮ ಸೇವೆ ಸಿಗುವ ಮೂಲಕ ಈ ಮಳಿಗೆ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಅಭಿವೃದ್ಧಿಯ ಸಂಕೇತ-ಎಂ.ಎಸ್ ಮಹಮ್ಮದ್
ಮಳಿಗೆಯ ಮೂರನೇ ವಿಭಾಗವನ್ನು ಉದ್ಘಾಟಿಸಿದ ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಪುತ್ತೂರು ವೇಗವಾಗಿ ಬೆಳೆಯುತ್ತಿದ್ದು ಅನೇಕ ಉದ್ಯಮಗಳು ಇಲ್ಲಿಗೆ ಬರುತ್ತಿದೆ, ಜಿಲ್ಲಾ ಕೇಂದ್ರವಾಗುವ ಹೊಸ್ತಿಲಲ್ಲಿರುವ ಪುತ್ತೂರಿನಲ್ಲಿ ಇಂತಹ ಮಳಿಗೆಗಳು ಪ್ರಾರಂಭವಾದರೆ ಅದು ಅಭಿವೃದ್ಧಿಯ ಸಂಕೇತ ಎಂದು ಹೇಳಿದರು. ಆಧುನಿಕ ಯುಗದಲ್ಲಿ ಮನೆಯ ಸೌಂದರ್ಯ ಎಷ್ಟಿದ್ದರೂ ಜನರಿಗೆ ಸಾಕಾಗುವುದಿಲ್ಲ, ಹಾಗಾಗಿ ವಿವಿಧ ಶೈಲಿಯ ಫರ್ನಿಚರ್‌ಗಳ ಮಳಿಗೆಯಾಗಿರುವ ಸಿಟಿ ಫರ್ನಿಚರ್ ಸೆಂಟರ್ ಉತ್ತಮ ವ್ಯವಹಾರದ ಮೂಲಕ ಯಶಸ್ಸು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಗುಣಮಟ್ಟದ ವ್ಯವಹಾರದಿಂದ ಉದ್ಯಮದಲ್ಲಿ ಯಶಸ್ಸು-ಅಡ್ವೊಕೇಟ್ ಶಾಕಿರ್ ಹಾಜಿ
ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಮಾತನಾಡಿ ಸೇವೆ ಮತ್ತು ವಸ್ತುಗಳ ಗುಣಮಟ್ಟದ ಮೇಲೆ ವ್ಯಾಪಾರದ ಭವಿಷ್ಯ ಅಡಗಿದ್ದು ಸಿಟಿ ಫರ್ನಿಚರ್ ಸೆಂಟರ್ ಗುಣಮಟ್ಟದ ಫರ್ನಿಚರ್ ಮಾರಾಟದಲ್ಲಿ ಹೆಸರು ಪಡೆದ ಮಳಿಗೆಯಾದ ಕಾರಣ ಅವರ ಮಳಿಗೆ ಪುತ್ತೂರಿನಲ್ಲೂ ಅಭಿವೃದ್ಧಿ ಹೊಂದಲಿದೆ, ಸ್ವಂತ ತಯಾರಿಕೆ ಹಾಗೂ ಹೋಲ್‌ಸೆಲ್, ರೀಟೇಲ್ ದರದಲ್ಲಿ ಫರ್ನಿಚರ್ ಐಟಂಗಳನ್ನು ಮಾರಾಟ ಮಾಡುವ ಈ ಮಳಿಗೆ ಗ್ರಾಹಕರ ವಿಶ್ವಾಸಗಳಿಸಿದ ಮಳಿಗೆಯಾಗಿ ಹೆಸರು ಪಡೆಯಲಿ ಎಂದು ಶುಭ ಹಾರೈಸಿದರು.

ಸ್ಪರ್ಧಾತ್ಮಕ ದರದಲ್ಲಿ ಫರ್ನಿಚರ್ ಮಾರಾಟ-ಬಶೀರ್ ಹಾಜಿ
ಸಿಟಿ ಫರ್ನಿಚರ್ ಸೆಂಟರ್‌ನ ಮಾಲಕ ಬಶೀರ್ ಹಾಜಿ ಮಾತನಾಡಿ ನಮ್ಮ ಮಳಿಗೆ ಕೇರಳದ ಮಂಜೇಶ್ವರ ಸಮೀಪ ಕಾರ್ಯಾಚರಿಸುತ್ತಿದ್ದು ಸ್ವಂತ ಫ್ಯಾಕ್ಟರಿ ಕೂಡಾ ಇದೆ. ಇದೀಗ ನಮ್ಮ ಮಳಿಗೆ ಪುತ್ತೂರಿನಲ್ಲಿ ಶುಭಾರಂಭಗೊಂಡಿದ್ದು ನಮ್ಮಲ್ಲಿ ಆಧುನಿಕ ಶೈಲಿಯ ವಿವಿಧ ವಿನ್ಯಾಸದ ಫರ್ನಿಚರ್‌ಗಳು ಸ್ಪರ್ಧಾತ್ಮಕ ದರದಲ್ಲಿ ನಮ್ಮ ಮಳಿಗೆಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ವಿಶಾಲ ಸ್ಥಳಾವಕಾಶ ಮತ್ತು ಪಾರ್ಕಿಂಗ್ ಸೌಲಭ್ಯವೂ ಇದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.
ಈ ಸಂದರ್ಭದಲ್ಲಿ ಶ್ರೀನಿಧಿ ಕಾಂಪ್ಲೆಕ್ಸ್‌ನ ಮಾಲಕ ಪ್ರಕಾಶ್ ಎಂ, ಮಹಮ್ಮದ್ ಸಖಾಫಿ ಪಾತೂರು, ಕರೀಂ ಕರಾವಳಿ, ರಶೀದ್ ಮುರ, ಅಲ್ತಾಫ್, ರಝಾಕ್ ಖಂಡಿಗ ಮತ್ತಿತರ ಹಲವರು ಉಪಸ್ಥಿತರಿದ್ದರು. ಸಿಟಿ ಫರ್ನಿಚರ್ ಸೆಂಟರ್‌ನ ಮಾಲಕ ಬಶೀರ್ ಹಾಜಿಯವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸಿಟಿ ಫರ್ನಿಚರ್ ಸೆಂಟರ್‌ನ ಮ್ಯಾನೇಜರ್ ಅಝೀಝ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here