ಸವಣೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶ್ರೀ ದುರ್ಗಾಪೂಜೆ ಸೆ.18 ಮತ್ತು ಸೆ.19ರಂದು ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಆಶೀರ್ವಾದಗಳೊಂದಿಗೆ ನಡೆಯಿತು.ಸೆ.18ರಂದು ಬೆಳಿಗ್ಗೆ10ಕ್ಕೆ ಹಸಿರು ಹೊರೆಕಾಣಿಕೆ, ಸಂಜೆ 6.30ಕ್ಕೆ ಶ್ರೀ ದುರ್ಗಾಪೂಜೆ ,ಅನ್ನಸಂತರ್ಪಣೆ ನಡೆಯಿತು.
ರಾತ್ರಿ ವಿ.ಜೆ.ವಿಖ್ಯಾತ್ ಸುಳ್ಯ ಸಾರಥ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ಹಾಗೂ ದಂಪತಿಗಳಿಗೆ ವಿಶೇಷ ಮನೋರಂಜನಾ ಆಟಗಳು ಹಾಗೂ ಉಡುಗೊರೆಯೊಂದಿಗೆ ಕುಟುಂಬೋತ್ಸವ ನಡೆಯಿತು.ಸೆ.19ರಂದು ಬೆಳಿಗ್ಗೆ ಗಣಪತಿ ವಿಗ್ರಹ ಪ್ರತಿಷ್ಟೆ,ಬಳಿಕ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಗಣಪತಿ ಹವನ,ಭಜನಾಮೃತ,ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ ,ಅನ್ನಸಂತರ್ಪಣೆ, ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷ ಬಳಗ ಇವರಿಂದ ಶ್ರೀರಾಮ ದರ್ಶನ ತಾಳಮದ್ದಳೆ ನಡೆಯಿತು.ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡೂರು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ. ಸರ್ವೆದೋಳಗುತ್ತು ವಹಿಸಿದ್ದರು.ಮಾಜಿ ಶಾಸಕ ಸಂಜೀವ ಮಠಂದೂರು ,ಆನಂದ ಪೂಜಾರಿ ಸರ್ವೆದೋಳಗುತ್ತು,ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ತಂಬುತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧಾರ್ಮಿಕ ಸಭೆಯ ಅತಿಥಿಗಳಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ,ಕೆಯ್ಯೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಮೊಕ್ತೇಸರ ಮೋಹನ್ ರೈ ಓಲೆಮುಂಡೋವು ಅವರು ಸಭೆಗೂ ಮುನ್ನ ಆಗಮಿಸಿ ದೇವರ ದರ್ಶನ ಪಡೆದು ಕಾರ್ಯಕ್ರಮದ ಆಯೋಜನೆಯ ವ್ಯವಸ್ಥೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ರೈ ಸರ್ವೆ ಸ್ವಾಗತಿಸಿ ,ಸಮಿತಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು ಅವರು ಪ್ರಸ್ತಾವನೆಗೈದರು.ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಸೊರಕೆ ವಂದಿಸಿದರು.ಉಪನ್ಯಾಸಕ ಡಾ.ಪ್ರವೀಣ್ ಎಸ್.ಡಿ. ಸರ್ವೆದೋಳ ಹಾಗೂ ಶಿಕ್ಷಕಿ ವಿನಯ ವಿ.ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕ ಶ್ರೀರಾಮ ಕಲ್ಲೂರಾಯ ,ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಶ್ವನಾಥ ರೈ ಮೇಗಿನಗುತ್ತು ಬಾವ,ಬೆಳಿಯಪ್ಪ ಗೌಡ ತಂಬುತ್ತಡ್ಕ,ರಾಧಾಕೃಷ್ಣ ರೈ ರೆಂಜಲಾಡಿ,ಪ್ರವೀಣ ರೈ ಮೇಗನಗುತ್ತು,ಜಯಂತಿ ನಾಯ್ಕ ನೆಕ್ಕಿತಡ್ಕ ,ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ್ ಎಸ್.ಡಿ.ಸರ್ವೆದೋಳಗುತ್ತು,ಕಾರ್ಯದರ್ಶಿಗಳಾದ ಗೌತಮ್ ರೈ ಸರ್ವೆ ,ರಿತೇಶ್ ರೈ ಬಾವ, ಜತೆ ಕಾರ್ಯದರ್ಶಿಗಳಾದ ಅಶೋಕ ನಾಯ್ಕ ಸೊರಕೆ,ಕಿರಣ್ ಎಸ್.ಡಿ.ಸರ್ವೆದೋಳಗುತ್ತು ಮೊದಲಾದವರು ವಿವಿಧ ಕಾರ್ಯ ನಿರ್ವಹಿಸಿದರು.