ಕಾಣಿಯೂರು: ಚಾರ್ವಾಕ ಗ್ರಾಮದ ನಾಣಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 27 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ 19ರಂದು ನಾಣಿಲ ಶಾಲಾ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ಶ್ರೀ ದೇವರ ಆರಾಧನೆ ಪ್ರಾರಂಭಗೊಂಡು, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಧಾರ್ಮಿಕ ಸಭಾಕಾರ್ಯಕ್ರಮ ನಡೆಯಿತು.
ಸಂಜೆ ನಡೆದ ಶೋಭಾಯಾತ್ರೆಯು ನಾಣಿಲ ಶಾಲಾ ವಠಾರದಿಂದ ಹೊರಟು ಶ್ರೀ ಕ್ಷೇತ್ರ ನಾಲ್ಕಂಬಕ್ಕೆ ಆಗಮಿಸಿ, ನಂತರ ದೈಪಿಲ ಬಳಿಯ ಕುಮಾರಧಾರ ನದಿಯಲ್ಲಿ ವಿಸರ್ಜನೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷರಾದ ಚಂದ್ರಕಲಾ ಜಯರಾಮ್ ಅರುವಗುತ್ತು, ವಿಜಯಕುಮಾರ್ ಸೊರಕೆ, ದೈಪಿಲ ಕ್ಷೇತ್ರದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್ ಗೌಡ ಅರುವಗುತ್ತು, ನಾಣಿಲ ಶಾಲಾ ಎಸ್.ಡಿ. ಎಂ. ಸಿ. ಅಧ್ಯಕ್ಷ ವಸಂತ ದಲಾರಿ, ಶಾಲಾ ಮುಖ್ಯಗುರು ಪದ್ಮಯ್ಯ ಗೌಡ, ಅಂಬುಲ ಅಶ್ವಿನಿ ಫಾರ್ಮ್ಸ್ ನ ಕುಮಾರಸ್ವಾಮೀ ಭಟ್, ಸಮಿತಿ ಅಧ್ಯಕ್ಷ ಗಂಗಾಧರ ಅಂಬುಲ, ಗೌರವ ಸಲಹೆಗಾರರಾದ ಯು.ಪಿ ರಾಮಕೃಷ್ಣ ಗೌಡ, ವೆಂಕಪ್ಪ ಗೌಡ ಮಾಚಿಲ, ನೇಮಣ್ಣ ಗೌಡ ಅಂಬುಲ, ಪ್ರವೀಣ್ ಕುಂಟ್ಯಾನ. ಲಿಂಗಪ್ಪ ಗೌಡ ಅಂಬುಲ, ಕಾರ್ಯದರ್ಶಿ ವಿಜಿತ್ ಮಾಚಿಲ, ಕೋಶಾಧಿಕಾರಿ ಸಂದೇಶ್ ಅಂಬುಲ, ಉಪಾಧ್ಯಕ್ಷ ರಾಘವ ಕೆಳಗಿನಕೇರಿ, ಜತೆ ಕಾರ್ಯದರ್ಶಿ ದಿನೇಶ್ ಕುಕ್ಕುನಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.