ಬಲ್ನಾಡು: ಅಪರೂಪದ ಬೆಕ್ಕು ಕಣ್ಣು ಹೋಲುವ ವಿಷರಹಿತ ಹಾವಿನ ರಕ್ಷಣೆ ಮಾಡಿದ ಉರಗ ಪ್ರೇಮಿ ತೇಜಸ್

0

ಪುತ್ತೂರು: ಬಲ್ನಾಡಿನ ಮನೆಯೊಂದರೊಳಗೆ ಸೇರಿದ್ದ ಅಪರೂಪದ ಬೆಕ್ಕಿನ ಕಣ್ಣು ಹೋಲುವ ಹಾವೊಂದನ್ನು ಉರಗ ಪ್ರೇಮಿ ತೇಜಸ್ ರಕ್ಷಣೆ ಮಾಡಿದ್ದಾರೆ.ಬಲ್ನಾಡಿನ ರವಿಕೃಷ್ಣ ಕಲ್ಲಜೆ ಅವರ ಮನೆಯೊಳಗೆ ಟೇಬಲ್ ಮೇಲೆ ಮಲಗಿದ್ದ ಈ ಅಪರೂಪದ ವಿಷ ರಹಿತ ಹಾವನ್ನು ಅವರು ರಕ್ಷಣೆ ಮಾಡಿದ್ದಾರೆ.

ಮೈ ಬಣ್ಣ ನೋಡಲು ಕನ್ನಡಿ ಹಾವಿನಂತೆ ಹೋಲುವುದರಿಂದ ಇದನ್ನು ಕನ್ನಡಿ ಹಾವು ಎಂದು ಹೊಡೆದು ಕೊಲ್ಲುವ ಸಾಧ್ಯತೆ ಜಾಸ್ತಿ. ಆದರೆ ಮನೆಯವರ ಜಾಗೃತೆಯ ಮೇಲೆ ಈ ಹಾವು ರಕ್ಷಣೆಯಾಗಿದೆ. ಮರದಲ್ಲಿ ಸಣ್ಣ ಪೊಟರೆಯಲ್ಲಿ ಜೀವಿಸುವ ಈ ಹಾವು ರಾತ್ರಿ ಸಂಚಾರಿ. ಹಲ್ಲಿ, ಪಕ್ಷಿಗಳ ಮೊಟ್ಟೆ, ಸಣ್ಣ ಪಕ್ಷಿಗಳ್ಳನ್ನ ತಿಂದು ಬದುಕುತ್ತದೆ ಎಂದು ತೇಜಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here