





ಅರಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 29 ನೇ ವರ್ಷದ ಗಣೇಶೋತ್ಸವ ಸೆ19 ರಂದು ಶ್ರೀ ಕೃಷ್ಣ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.


ಪುರೋಹಿತರಾದ ಕಾವು ಶಿವಪ್ರಸಾದ್ ಕಡಮಣ್ಣಾಯವರ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಬೆಳಿಗ್ಗೆ ಗಣೇಶ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ, ಭಜನೆ, ಅಯ್ಯಪ್ಪ ಭಜನ ಮಂಡಳಿ ದರ್ಭೆತ್ತಡ್ಕ ಇವರಿಂದ ಕುಣಿತ ಭಜನೆ,ನಾಗತಂಬಿಲ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಭಕ್ತಿ ಗೀತೆ ಸ್ವರ್ಧೆ ನಡೆಯಿತು.





ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ದೈವ ನರ್ತಕ ಹಾಗೂ ಸಿವಿಲ್ ಇಂಜಿನಿಯರ್ ಡಾ/ ರವೀಶ್ ಪಡುಮಲೆ ಮಾತಾಡಿ ,ಹಿಂದೂ ಧರ್ಮ ಉಳಿದರೆ ಜಗತ್ತು ಉಳಿದೀತು.ಭಾರತವಿದ್ದರೆ ಜಗತ್ತು. ಭಾರತ ಇಲ್ಲದಿದ್ದರೆ ಜಗತ್ತಿಲ್ಲ.ಭಾರತ ವಿಶ್ವ ಗುರುವಾಗುವ ಕಾಲ ಸನ್ನಿಹಿತವಾಗಿದೆ .ಯುವ ಜನಾಂಗ ಮತಾಂತರ,ಲವ್ ಜಿಹಾದ್ ಹಾಗೂ ವಿದೇಶಿ ಸಂಸ್ಕೃತಿಗೆ ಮಾರು ಹೋಗದೆ, ನಮ್ಮ ಸಂಸ್ಕೃತಿ ಸಂಸ್ಕಾರ ಕಲಿತು, ಧಾರ್ಮಿಕ ವಿಚಾರ ತಿಳಿದು ನಮ್ಮ ಮಕ್ಕಳಿಗೆ ಆಧ್ಯಾತ್ಮಿಕ ವಿಚಾರಧಾರೆಯನ್ನು ತಿಳಿಸುವ ಮೂಲಕ ಜಾಗೃತಿ ಮೂಡಿಸ ಬೇಕು.ಯಾರೇ ಕೂಗಾಡಿದರೂ ಸೂರ್ಯ ಚಂದ್ರ ರು ಇರುವ ತನಕ ನಮ್ಮ ಧರ್ಮ ಶಾಶ್ವತ.ಈ ಮಣ್ಣಿನಲ್ಲಿ ಧರ್ಮ ನಾಶವಾಗಲು ಸಾಧ್ಯವಿಲ್ಲ.ಇದು ಹಿಂದು ಧರ್ಮದ ತಾಕತ್ತು ಎಂದರು.

ಉದ್ಯಮಿ ಕಿಶೋರ್ ಶೆಟ್ಟಿ ಅರಿಯಡ್ಕ ರವರು ಮಾತನಾಡಿ, ಸುಂದರ ಪ್ರಕೃತಿ ಮಡಿಲಲ್ಲಿ ಶ್ರೀ ಕೃಷ್ಣ ಮಂದಿರ ಕಂಡು ಸಂತೋಷವಾಯಿತು.ಗಣೇಶೊತ್ಸವ ನಮ್ಮೂರಿನಲ್ಲಿ ನಡೆಯುತ್ತಿರುವುದು ಒಳ್ಳೆಯ ಕಾರ್ಯಕ್ರಮ.ಧಾರ್ಮಿಕ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಸದಾ ಇದೆ ಎಂದರು.
ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಮದ್ಲ ರವರು ಮಾತನಾಡಿ, ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಯದಲ್ಲಿ ತಾವೆಲ್ಲರೂ ಕೈ ಜೋಡಿಸಿದ ಕಾರಣ ಭವ್ಯ ಮಂದಿರ ತಲೆ ಎತ್ತಿದೆ.ಮಂದಿರಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸತತವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡ್ಯಡ್ಕ ವಾಸು ಪೂಜಾರಿಯವರು ಮಾತಾಡಿ, ಭಜನಾ ಮಂದಿರದಲ್ಲಿ ಇನ್ನಷ್ಟು ಕಾಮಗಾರಿ ನಡೆಯಲು ಬಾಕಿ ಇದೆ.ಇದಕ್ಕೆತಮ್ಮೆಲ್ಲರ ಸಹಕಾರ ಅಗತ್ಯ.ಕಳೆದ 29 ವರ್ಷಗಳಿಂದ ಸಂಭ್ರಮದಿಂದ ಗಣೇಶೋತ್ಸವ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಒಗ್ಗಟ್ಟಿಗಾಗಿ ಬಾಲಗಂಗಾಧರ ತಿಲಕ್ ರವರು ಗಣೇಶೋತ್ಸವ ಆರಂಭಿಸಿದರು.ಇಂದು ನಾಡಿನಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ ಮಾಡಿ ಹಿಂದೂ ಸಮಾಜವನ್ನು ಜಾಗೃತ ಗೊಳಿಸುತ್ತಿದ್ದೇವೆ.ಇಂದು ಬಾಲಗಂಗಾಧರ ತಿಲಕ್ ರವರು ಕಂಡ ಕನಸು ನನಸಾಗಿದೆ ಎಂದರು.
ಗೌರವಾರ್ಪಣೆ
ಗಣೇಶ ವಿಗ್ರಹ ನೀಡಿರುವ ಕುತ್ಯಾಡಿ ಸದಾಶಿವ ಮಣಿಯಾಣಿ ಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಡುಗೆ ಸಹಾಯಕಾರಿ ಸೇವೆ ಸಲ್ಲಿಸಿದ ಕೊರಗಪ್ಪ ಗೌಡ ಮಡ್ಯಂಗಳ, ಕ್ರೀಡಾ ಕೂಟದ ದಿನ ಅನ್ನಸಂತರ್ಪಣೆ ಕಾರ್ಯಗಳಿಗೆ ಸಹಕಾರ ನೀಡಿದ ಮಿಂಚು ಸ್ವಸಹಾಯ ಸಂಘಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ, ಕುಶಾಲಪ್ಪ ಗೌಡ ಮಡ್ಯಂಗಳ, ದೀಪಕ್ ಕುಲಾಲ್ ಕೌಡಿಚ್ಚಾರು, ಶೇಷಪ್ಪ ನಾಯ್ಕ ಮಾಯಿಲಕೊಚ್ಚಿ , ಉಮೇಶ್ ಗೌಡ ಕನ್ನಯ, ಸುಕುಮಾರ ಮಡ್ಯಂಗಳ, ಕುಂಞ ರಾಮ ಮಣಿಯಾಣಿ ಕುತ್ಯಾಡಿ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.
ಅಸ್ಮಿ ಪಾಪೆಮಜಲು ಪ್ರಾರ್ಥಿಸಿ ಸಮಿತಿ ಉಪಾಧ್ಯಕ್ಷ ಸುಶಾಂತ್ ರೈ ಕುತ್ಯಾಡಿ ಸ್ವಾಗತಿಸಿದರು.ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಕುಲಾಲ್ ವರದಿ ವಾಚಿಸಿದರು.ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್ ಬಹುಮಾನದ ಪಟ್ಟಿ ವಾಚಿಸಿದರು.ಸಮಿತಿ ಉಪಾಧ್ಯಕ್ಷ ದುರ್ಗಾ ಪ್ರಸಾದ್ ಕುತ್ಯಾಡಿ ವಂದಿಸಿ, ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
ಶೋಭಾ ಯಾತ್ರೆ
ಸಂಜೆ ವಿಜ್ರಂಭಣೆಯಿಂದ ಶೋಭಾ ಯಾತ್ರೆ ನಡೆದು, ಅಯ್ಯಪ್ಪ ಭಜನಾ ಮಂದಿರ ಪೆರಿಗೇರಿ ಇವರ ಸಹಕಾರದೊಂದಿಗೆ ಕ್ಷೀರ ಹೊಳೆಯಲ್ಲಿ ಗಣಪತಿ ವಿಗ್ರಹ ವಿಸರ್ಜನೆ ಮಾಡಲಾಯಿತು.









