ವಿಟ್ಲ: ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಆನಂತಪದ್ಮನಾಭರವರು ಸೆ.22 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರು ಪ್ರಭಾರ ನೆಲೆಯಲ್ಲಿ ಬಂಟ್ಬಾಳ ನಗರ ಠಾಣಾ ಇನ್ಸ್ ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದರು. ಪ್ರಭಾರ ಇನ್ಸ್ ಪೆಕ್ಟರ್ ನಾಗರಾಜ್ ಎಚ್.ಇ.ಅವರು ಪುಷ್ಪಗುಚ್ಚ ನೀಡಿ ಅನಂತಪದ್ಮನಾಭರವರನ್ನು ಸ್ವಾಗತಿಸಿದರು. ವಿವೇಕಾನಂದ ಅವರು ವರ್ಗಾವಣೆ ಬಳಿಕ ಖಾಲಿಯಾಗಿದ್ದ ನಗರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆಗೆ ಕದ್ರಿ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದು, ಲೋಕಾಯುಕ್ತ ಇಲಾಖೆಗೆ ವರ್ಗಾವಣೆಗೊಂಡಿದ್ದ ಆನಂತಪದ್ಮನಾಭ ಅವರನ್ನು ನೇಮಕ ಮಾಡಿ ಸರಕಾರ ಅದೇಶ ನೀಡಿತ್ತು.