ಆಲಂಕಾರು: ಸಂಸ್ಕಾರ, ಸಂಘಟನೆಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ದ.ಕ ಜಿಲ್ಲೆ ಇದರ ವತಿಯಿಂದ 21 ದಿನಗಳ ಉಚಿತ ಯೋಗ ಸ್ಪರ್ಶ ತರಗತಿ ಶ್ರೀ ಸದಾಶಿವ ದೇವಸ್ಥಾನ ಕೊಯಿಲಾ ಇದರ ಸಭಾಂಗಣದಲ್ಲಿ ಸೆ.24 ರಂದು ಬೆಳಿಗ್ಗೆ 6 ಗಂಟೆಗೆ ಉದ್ಘಾಟನೆಗೊಂಡಿತ್ತು.ಕೊಯಿಲ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಯಧುಶ್ರೀ ಆನೆಗುಂಡಿ ಉದ್ಘಾಟಿಸಿ ಶುಭಹಾರೈಸಿದರು. ಮಂಗಳೂರು ಕದ್ರಿ ಶಾಖೆಯ ಮಾರ್ಗದರ್ಶಕರಾದ ಆನಂದ ಕುಂಟಿನಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.ಸಭಾಧ್ಯಕ್ಷತೆ ಯನ್ನು ಉಪ್ಪಿನಂಗಡಿ ಶಾಖೆಯ ಶಿಕ್ಷಕರಾದ ಗೋವಿಂದ ಪ್ರಸಾದ್ ಕಜೆ ವಹಿಸಿದ್ದರು, ಯೋಗಬಂಧುಗಳಾದ ಸದಾಶಿವ ಶೆಟ್ಟಿ ಮಾರಂಗ, ಪ್ರದೀಪ್ ರೈ ಮನವಳಿಕೆ, ದಾಮೋದರ, ಪದ್ಮನಾಭ ಭಂಡಾರಿಯವರು ಯೋಗಭ್ಯಾಸದಿಂದಾ ಅನುಭವವನ್ನು ತಿಳಿಸಿದರು, ಯೋಗಶಿಕ್ಷಕಿ ಲಲಿತ ಕಾರ್ಯಕ್ರಮ ನಿರೂಪಿಸಿ,ಅಮಿತಾ ಪ್ರಾರ್ಥಿಸಿ, ಗುರು ಕಿರಣ್ ಶೆಟ್ಟಿ ಸ್ವಾಗತಿಸಿ,ಯೋಗಬಂಧುಗಳು ಪಾಲಿಸಬೇಕಾದ ಸೂಚನೆಯನ್ನು ಶರ್ಮಿಳ ಮನವಳಿಕೆ ತಿಳಿಸಿ ಚಕ್ರಪಾಣಿ ಬಾಕಿಲ ಧನ್ಯವಾದ ಸಮರ್ಪಿಸಿದರು ಶೀನಪ್ಪ ಗೌಡ ವಳಕಡಮ, ಚೇತನ್ ಆನೆಗುಂಡಿ, ವಿನಯಕುಮಾರ್ ರೈ ಪಟ್ಟೆ, ಶ್ರೀರಾಮ ಅತಿಥಿಗಳನ್ನು ಸ್ವಾಗತಿಸಿದರು. ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಕೊಯಿಲ ಗ್ರಾ.ಪಂ ಅಧ್ಯಕ್ಷರಾದ ಪುಷ್ಪಾ ಸುಭಾಸ್ ಕುಮಾರ್ ಶೆಟ್ಟಿ ಉಪ್ಪಿನಂಗಡಿಯ ಯೋಗಶಿಕ್ಷಕರಾದ ಸಂತೋಷ್ ಕುಮಾರ್ ಸೇರಿದಂತೆ ಗಾಣಿಗ,ಉಪ್ಪಿನಂಗಡಿ,ಆಲಂಕಾರು ಭಾರತಿ ಶಾಖೆಯ ಯೊಗಬಂಧುಗಳು ಹಾಗೂ ಊರವರು ಭಾಗವಹಿಸಿದರು.