ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ

0

ರೂ.346ಕೋಟಿ ವ್ಯವಹಾರ, ರೂ.81.25 ಲಕ್ಷ ಲಾಭ, ಶೇ.10 ಡಿವಿಡೆಂಡ್

ವಿಟ್ಲ : ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವರದಿ ಮಂಡಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋದ ಬಿ. ಮಾತನಾಡಿ, ಸಂಘವು ವರದಿ ವರ್ಷದಲ್ಲಿ ರೂ. 346,89,62,567 ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ ರೂ. 81,25,589 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್‌ನ್ನು ನೀಡಲು ಆಡಳಿತ ಮಂಡಳಿಐ ಘೋಷಣೆ ಮಾಡಿರುತ್ತಾರೆ ಎಂದು ಅವರು ತಿಳಿಸಿದರು. ಸಂಘವು ವರ್ಷಾಂತ್ಯಕ್ಕೆ ರೂ. 49,19,86,356 ಠೇವಣಿ ಹೊಂದಿದ್ದು ವರದಿ ವರ್ಷದಲ್ಲಿ ಒಟ್ಟು ರೂ. 29,61,66,624 ಸಾಲ ವಿತರಿಸಲಾಗಿದೆ, ವರ್ಷಾಂತ್ಯಕ್ಕೆ ರೂ. 30,11,67,387ಸಾಲ ಹೊಂದಿರುತ್ತದೆ ಹಾಗೂ ರೂ. 6,72,73,268 ರಷ್ಟು ನಿಧಿ ಹಾಗೂ ಇತರ ನಿಧಿಗಳನ್ನು ಸಂಘ ಹೊಂದಿರುತ್ತದೆ ಎಂದು ಅವರು ತಿಳಿಸಿದರು.

ಸನ್ಮಾನ:
ಕರ್ನಾಟಕ ರಾಜ್ಯದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಕೆ. ಎನ್. ಗಂಗಾಧರ ಆಳ್ವ, ಅನಂತಾಡಿ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ನೇರಳಕಟ್ಟೆ ಹಾಗೂ ಬಿ.ಎಸ್ಸಿ ಪದವಿಯಲ್ಲಿ ದ್ವಿತಿಯ ಶ್ರೇಣಿ, ಎಂ.ಎಸ್ಸಿ ವಿಭಾಗದ ಗಣಿತಶಾಸ್ತ್ರದಲ್ಲಿ ಪ್ರಥಮ ಶ್ರೇಣಿ ಪಡೆದ ಕು ಎನ್. ಐಶ್ವರ್ಯ ನಾಯಕ್ ನೇರಳಕಟ್ಟೆ ಇವರನ್ನು ಮತ್ತು ಸಂಘದ ವ್ಯಾಪ್ತಿಗೆ ಸೇರಿದ ಅನಂತಾಡಿ, ನೆಟ್ಲಮುನ್ನೂರು, ಪೆರಾಜೆ ಹಾಗೂ ಮಾಣಿ ಗ್ರಾಮದ ಪ್ರಾಥಮಿಕ, ಎಸ್‌.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ತರಗತಿಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ನಾರಾಯಣ ಶೆಟ್ಟಿ ಕೆ, ವೆಂಕಟೇಶ ಕೋಟ್ಯಾನ್, ರಾಘವ ಗೌಡ, ಶ್ರೀನಿವಾಸ ಪೂಜಾರಿ, ಸುಧಾಕರ ನಾಯ್ಕ, ನಿರಂಜನ್ ರೈ, ಪಾಂಡುರಂಗ ಎ. ಕಾಮತ್‌, ಸಂಕಪ್ಪ ಜೆ, ಭಾರತಿ ಹಾಗೂ ಶಾಲಿನಿ ಉಪಸ್ಥಿತರಿದ್ದರು. ಗುಮಾಸ್ತ ರವಿ ಎನ್. ಇವರು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಡಿ, ತನಿಯಪ್ಪ ಗೌಡ ಸ್ವಾಗತಿಸಿದರು ನಿರ್ದೇಶಕ ಸನತ್ ಕುಮಾರ್ ರೈ ವಂದಿಸಿದರು.

LEAVE A REPLY

Please enter your comment!
Please enter your name here