ಸವಣೂರಿನಲ್ಲಿ ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

0

ಸವಣೂರು : ದೈಹಿಕ ಹಾಗೂ ಮಾನಸಿಕ ಸುಸ್ಥಿರಕ್ಕೆ ಕ್ರೀಡೆ ಸಹಕಾರಿ, ನಾಡಹಬ್ಬ ದಸರಾ ಅಂಗವಾಗಿ ಎಲ್ಲಾ ತಾಲೂಕಿನಲ್ಲೂ ಕ್ರೀಡಾಕೂಟ ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲದೇ ಸಾರ್ವಜನಿಕರೂ ಮುಕ್ತವಾಗಿ ಈ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು. ಕ್ರೀಡೆ ಎಲ್ಲರನ್ನೂ ಸಂಘಟಿಸುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಸವಣೂರು ಸ.ಪೂ.ಕಾಲೇಜಿನ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ತಾಲ್ಲೂಕು ಪಂಚಾಯತ್ ಕಡಬ, ಸವಣೂರು ಗ್ರಾಮ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ತಾಲ್ಲೂಕು ಯುವಜನ ಒಕ್ಕೂಟ ಕಡಬ, ಸವಣೂರು ಯುವಕ ಮಂಡ ಇದರ ಸಹಯೋಗದೊಂದಿಗೆ ಸೆ.24ರಂದು ನಡೆದ ಕಡಬ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕಡಬ ತಾಲೂಕಿನ ಸವಣೂರಿನಲ್ಲಿ ಯಾವುದೇ ಸರಕಾರಿ ಹಾಗೂ ಸಂಘಟನೆಯ ಕಾರ್ಯಕ್ರಮ ಆಯೋಜಿಸಿದರೆ ಯಶಸ್ವಿಗೆ ದೊಡ್ಡ ಯುವಪಡೆಯೇ ತಯಾರಿಯಾಗಿರುತ್ತದೆ, ಇಲ್ಲಿನ ಸವಣೂರು ಯುವಕ ಮಂಡಲ ಹಾಗೂ ಊರಿನವರು ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸವಣೂರಿನಲ್ಲಿರುವ ಸರಕಾರಿ ಕ್ರೀಡಾಂಗಣವನ್ನು ಅಭಿವೃದ್ದಿ ಮಾಡಿ ಮಾದರಿ ಕ್ರೀಡಾಂಗಣವನ್ನಾಗಿ ಮಾಡಲು ಪ್ರಯತ್ನ ನಡೆಸಲಾಗುವುದು ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ, ಕಡಬ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ್‌ ಮಾತನಾಡಿ, ಸಂಘಟನಾತ್ಮಕವಾಗಿ ಸವಣೂರು ಹೆಸರು ಪಡೆದ ಊರು. ಈ ನಿಟ್ಟಿನಲ್ಲಿ ದಸರಾ ಕ್ರೀಡಾಕೂಟ ನಡೆಸಲು ಸವಣೂರನ್ನು ಆಯ್ಕೆ ಮಾಡಲಾಗಿದ್ದು, ಯಶಸ್ವಿಯಾಗಿ ಆಯೋಜನೆಯಾಗಿದೆ. ಸವಣೂರು ಗ್ರಾ.ಪಂ, ಯುವಕ ಮಂಡಲ ಹಾಗೂ ಸ.ಪ.ಪೂ.ಕಾಲೇಜು, ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರ ಶ್ರಮವನ್ನೂ ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸವಣೂರಿನ ಕ್ರೀಡಾಂಗಣವನ್ನು ಗ್ರಾ.ಪಂ.ನ ಮೂಲಕ ಅಭಿವೃದ್ದಿ ಮಾಡಲು ಎಲ್ಲಾ ಸಹಕಾರ ನೀಡಲಾಗುವುದು ಎಂದರು.

ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್‌ ರೈ ಕೆಡೆಂಜಿ ಮಾತನಾಡಿ, ಸವಣೂರಿನಲ್ಲಿ ಯಾವುದೇ ಕಾರ್ಯಕ್ರಮವನ್ನು ಯಶಸ್ವಿಮಾಡುವ ನಿಟ್ಟಿನಲ್ಲಿ ತಂಡವಾಗಿ ಕೆಲಸ ಮಾಡಲಾಗುತ್ತದೆ.ಸಂಘಟಕ ಸುರೇಶ್‌ ರೈ ಸೂಡಿಮುಳ್ಳು ಹಾಗೂ ಸವಣೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್‌ ಅವರು ಯಾವುದೇ ಕಾರ್ಯಕ್ರಮದ ಜವಾಬ್ದಾರಿ ನೀಡಿದರೂ ಅದನ್ನು ಯಶಸ್ವಿಯಾಗಿ ಮಾಡುತ್ತಾರೆ ಎಂದರು.

ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್‌ ಮೆದು ಮಾತನಾಡಿ, ಸವಣೂರು ಸಾಂಸ್ಕೃತಿಕ ಹಾಗೂ ಕ್ರೀಡೆಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳುವ ಗ್ರಾಮ. ಸವಣೂರಿನ ಕ್ರೀಡಾಂಗಣವನ್ನು ಮುಂದಿನ ದಿನಗಳಲ್ಲಿ ಮಾದರಿ ಕ್ರೀಡಾಂಗಣವನ್ನು ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಸಹಕಾರ ಕೋರಿದರು.

ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸವಣೂರು ಗ್ರಾ.ಪಂ.ಅಭಿವೃದ್ದಿ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡಲಿದೆ.ಜನತೆಯೂ ಗ್ರಾ.ಪಂ.ಗೆ ಸಲಹೆ, ಸಹಕಾರ ನೀಡಬೇಕು ಎಂದರು.

ವೇದಿಕೆಯಲ್ಲಿ ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್‌ ಮೈಲೇರಿ, ಸಾಮಾಜಿಕ ಮುಂದಾಳು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಸವಣೂರು ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ , ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ, ಕಾಲೇಜಿನ ಕಟ್ಟಡ ಸಮಿತಿಯ ಅಧ್ಯಕ್ಷ ಪಿ.ಡಿ.ಕೃಷ್ಣ ಕುಮಾರ್‌ ರೈ ದೇವಸ್ಯ, ತಾಲೂಕು ಅಮೆಚ್ಚೂರು ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ಮೊಯ್ದಿನ್‌, ಕಡಬ ತಾ.ಪಂ.ವ್ಯವಸ್ಥಾಪಕ ಭುವನೇಶ್‌ , ಸವಣೂರು ಗ್ರಾ.ಪಂ.ಸದಸ್ಯರಾದ ಚಂದ್ರಾವತಿ ಸುಣ್ಣಾಜೆ , ಅಬ್ದುಲ್‌ ರಝಾಕ್‌, ಇಂದಿರಾ ಬೇರಿಕೆ, ರಾಜೀವಿ ಶೆಟ್ಟಿ, ಶೀನಪ್ಪ ಶೆಟ್ಟಿ ನೆಕ್ರಾಜೆ, ಎಂ.ಎ.ರಫೀಕ್‌, ಚೆನ್ನು ಮಾಂತೂರು, ತೀರ್ಥರಾಮ ಕೆಡೆಂಜಿ, ಬಾಬು ಎನ್‌, ಸತೀಶ್‌ ಅಂಗಡಿಮೂಲೆ, ಹರಿಕಲಾ ರೈ, ಅಭಿವೃದ್ದಿ ಅಧಿಕಾರಿ ಸಂದೇಶ್‌, ಲೆಕ್ಕಸಹಾಯಕ ಎ.ಮನ್ಮಥ, ಸವಣೂರು ಸಿಎ ಬ್ಯಾಂಕ್‌ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ನಾರಾಯಣ ಮೂರ್ತಿ, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್‌ ಕೆ.ಸವಣೂರು, ಸವಣೂರು ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಓಡಂತರ್ಯ, ಸವಣೂರು ಪ್ರೌಢಶಾಲಾ ಮುಖ್ಯಗುರು ರಘು ಬಿ.ಆರ್.‌,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್‌ ಕೋಡಿಬೈಲು ,ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಮಾಜಿ ಸದಸ್ಯ ಸತೀಶ್‌ ಬಲ್ಯಾಯ ,ಚೇತನ್‌ ಕೋಡಿಬೈಲು,ಸಚಿನ್‌ ಮೊದಲಾದವರಿದ್ದರು.

ಕಡಬ ತಾಲೂಕು ದಸರಾ ಕ್ರೀಡಾಕೂಟದ ಸಂಯೋಜಕ ಸುರೇಶ್‌ರೈ ಸೂಡಿಮುಳ್ಳು ಸ್ವಾಗತಿಸಿದರು.ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ. ವಂದಿಸಿದರು. ಕ್ರೀಡಾಕೂಟದ ನೋಡಲ್‌ ಅಧಿಕಾರಿ ಮಾಮಚ್ಚನ್‌ ಎಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here