ಅಲ್ಪಸಂಖ್ಯಾತರ ಸ್ಕೀಂ ಹೆಸರಿನಲ್ಲಿ ದಂಧೆ ನಡೆಸಿದರೆ ಹುಷಾರ್: ಶಾಸಕರ ಎಚ್ಚರಿಕೆ

0

ಪುತ್ತೂರು: ಅಲ್ಪಸಂಖ್ಯಾತರಿಗೆಂದು ರಾಜ್ಯದ ಕಾಂಗ್ರೆಸ್ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಈ ಯೋಜನೆಗಳನ್ನು ಕೊಡಿಸುವುದಾಗಿ ಹೇಳಿ ಕೆಲವು ದಳ್ಳಾಳಿಗಳು ಜನರಿಂದ ಹಣ ಪಡೆದು ಸ್ಕೀಂ ಕೊಡಿಸುವುದಾಗಿ ಹೇಳುತ್ತಿದ್ದು ಈ ವಿಚಾರ ನನ್ನ ಗಮನಕ್ಕೆ ಬಂದಿದೆ, ಹಾಗೇನಾದರೂ ದಂಧೆ ಮಾಡಿದಲ್ಲಿ ಅವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರಾದ ಅಶೋಕ್ ರೈ ಎಚ್ಚರಿಕೆ ನೀಡಿದ್ದಾರೆ.
ಕೊಳ್ತಿಗೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಹಿಂದಿನವರು ಕೆಲವರಿಗೆ ಆ ಬುದ್ದಿಯನ್ನು ಕಲಿಸಿಕೊಟ್ಟಿದ್ದಾರೆ. ಅಲ್ಪಸಂಖ್ಯಾತರು ವಿವಿಧ ಯೋಜನೆಗಳನ್ನು ಪಡೆಯಬೇಕಾದರೆ ನೀವು ಶಾಸಕರ ಬಳಿ ಹೋಗಬೇಕಾಗಿಲ್ಲ, ನನಗೆ ರಾಜ್ಯದ ಮುಖ್ಯ ಕಚೇರಿಯ ಅಧಿಕಾರಿಯ ನೇರ ಸಂಪರ್ಕ ಇದೆ, ನಾನು ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ ಎಂದು ಹೇಳಿ ಬಡವರಿಂದ ಹಣ ಪಡೆದು ಅವರಿಗೆ ಮೋಸ ಮಾಡುವ ಜಾಲವೊಂದು ಪುತ್ತೂರಿನಲ್ಲಿ ಸಕ್ರೀಯವಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ರೀತಿಯ ದಂಧೆ ನಡೆಸುವ ಯಾರೇ ಆಗಲಿ ಅವರನ್ನು ಕಾನೂನಿನ ಕಟಕಟೆಗೆ ತಂದೊಪ್ಪಿಸುತ್ತೇನೆ. ಜನರು ಬ್ರೋಕರ್‌ಗಳ ಬಳಿ ಹೋಗದೆ ನೇರವಾಗಿ ಆನ್ ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ ಯಾರಿಗೂ ನಯಾ ಪೈಸೆ ಕೊಡಬೇಡಿ, ಎಜೆಂಟ್ ಗಳ ಬಳಿ ಹೋಗಬೇಡಿ ಎಂದು ಶಾಸಕರು ಮನವಿ ಮಾಡಿದರು. ದಂಧೆ ಮಾಡುವುದೆಲ್ಲಾ ಮುಂದೆ ನಡೆಯುವುದಿಲ್ಲ ಅಲ್ಪಸಂಖ್ಯಾತ ಇಲಾಖೆಗೆ ಸೂಚನೆಯನ್ನು ನೀಡಿದ್ದು ಕಮಿಷನ್ ದಂಧೆ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದೇನೆ. ಕೊಳವೆ ಬಾವಿ ತೆಗೆಸಿದರೆ 50 ಸಾವಿರದವರೆಗೂ ಹಿಂದೆ ಕಮಿಷನ್ ಪಡೆದುಕೊಂಡಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಶಾಸಕರು ಹೇಳಿದರು

LEAVE A REPLY

Please enter your comment!
Please enter your name here