ಕಬಕ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೆ.25ರಂದು ಸ್ವಚ್ಛತೆಯೇ ಸೇವೆ ಕಾಲ್ನಡಿಗೆ ಜಾಥಾವನ್ನು ಕಬಕ ಪದವಿಪೂರ್ವ ಕಾಲೇಜಿನಿಂದ ಕಬಕ ಗ್ರಾಮ ಪಂಚಾಯತಿಯವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಜಾಥಾದಲ್ಲಿ ಸ್ವಚ್ಛತೆಯ ಕುರಿತು ಘೋಷಣೆ , ರಸ್ತೆಯ ಬದಿಯಲ್ಲಿರುವ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಕಬಕ ಗ್ರಾಮ ಪಂಚಾಯತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಪ್ರತಿಜ್ಞೆಯನ್ನು ಪ್ರಾಂಶುಪಾಲ ಶ್ರೀಧರ ರೈ ಕೆ ಬೋಧಿಸಿದರು. ವನಿತಾ ಜೀವಶಾಸ್ತ್ರ ಉಪನ್ಯಾಸಕಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸಿ ಎಲ್ಲರನ್ನೂ ಸ್ವಾಗತಿಸಿದರು .ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶಾಬಾ, ಗ್ರಾಮ ಪಂಚಾಯತ್ ನ ಅಧ್ಯಕ್ಷ ಸುಶೀಲ, ಕಬಕ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಆಶಾ, ಪಂಚಾಯತ್ ನ ಕಾರ್ಯದರ್ಶಿ ಸುರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಬಕ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಸುರೇಖಾ,ಶಿಕ್ಷಕಿ ಶಾಂತಾ ಇವರುಗಳು ಸ್ವಚ್ಛತೆಯ ಬಗ್ಗೆ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹಮ್ಮದ್ ಕಬಕ ಕಾರ‍್ಸ್ ,ವಿದ್ಯಾರ್ಥಿಗಳ ಜಾಥಾದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಜಾಥಾದಲ್ಲಿ ಕಬಕ ಕಾಲೇಜಿನ ಉಪನ್ಯಾಸಕಿಯರಾದ ಕವನ,ಅಶ್ವಿತಾ,ಚಂದ್ರಿಕಾ,ಸ್ವಾತಿ ,ಉಷಾ ,ಸುಶ್ಮಿತಾ ಮತ್ತು ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಕೃಷ್ಣಯ್ಯ ಹಾಗೂ ಎಲ್ಲ ಶಿಕ್ಷಕಿಯರು ಜಾಥಾದಲ್ಲಿ ಭಾಗವಹಿಸಿದ್ದರು.
ನಯನ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದ್ದರು. ಶ್ರೀನಿವಾಸ ಬಡೆಕ್ಕಿಲ್ಲಾಯ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.ಈ ಕಾರ್ಯಕ್ರಮದಲ್ಲಿ ಕಬಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಬಕ ಪ್ರೌಢಶಾಲೆಯ ಒಟ್ಟು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.