ಅಡ್ಕಸ್ಥಳ: ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ- ಪಿಕಪ್ ಚಾಲಕ ಮೃತ್ಯು, ಇನ್ನೋರ್ವ ಗಂಭೀರ

0

ವಿಟ್ಲ: ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ಪಿಕಪ್ ವಾಹನದ ಚಾಲಕ ಮೃತಪಟ್ಟು, ಅದರಲ್ಲಿದ್ದ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಸಾರಡ್ಕ ಸಮೀಪದ ಅಡ್ಕಸ್ಥಳದ ಗಡಿಭಾಗದಲ್ಲಿ ನಡೆದಿದೆ.ಪಿಕಪ್ ಚಾಲಕ ಮಣಿಯಂಪಾರೆ ನಿವಾಸಿ ಮುಸ್ತಾಫ ಪಿ.ಎ. (38 ವ.) ರವರು ಮೃತ ದುರ್ದೈವಿ. ಪಿಕಪ್ ವಾಹನದಲ್ಲಿದ್ದ ಶೇಣಿ ನಿವಾಸಿ ರಾಮಚಂದ್ರ ರವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿರುದ್ಧ ದಿಕ್ಕಿನಿಂದ ಬಂದ ಕಾರೊಂದನ್ನು ತಪ್ಪಿಸುವ ಭರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ಸು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅಡಿಕೆ ಸಸಿ ಸಾಗಾಟದ ಪಿಕಪ್‌ ವಾಹನಕ್ಕೆ ಡಿಕ್ಕಿಯಾಗಿದೆ. ತಲೆಗೆ ತೀವ್ರ ಗಾಯಗೊಂಡಿದ್ದ ಮುಸ್ತಫಾರನ್ನು ವಿಟ್ಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here