ಇಡ್ಕಿದು :ತನಿಖೆಯಲ್ಲಿ ದೃಢಪಡದ ಗಾಂಜಾ ಸೇವನೆ-ಅಪ್ರಾಪ್ತ ಬಾಲಕರಿಬ್ಬರ ಸಹಿತ ಮೂವರನ್ನೂ ಬಿಡುಗಡೆಗೊಳಿಸಿದ‌ ಪೊಲೀಸರು

0

ಪುತ್ತೂರು: ಇಡ್ಕಿದು ಗ್ರಾಮದ ಮುಂಡ್ರಬೈಲಿನ ನಿರ್ಜನ ಪ್ರದೇಶದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಅಪ್ರಾಪ್ತ ಇಬ್ಬರು ಬಾಲಕರ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ಆದರೆ ಆ ಮೂವರು ಮಾದಕ ವಸ್ತು ಸೇವನೆ ಮಾಡಿರುವುದು ತನಿಖೆಯಲ್ಲಿ ದೃಡಪಡದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಘಟನೆ ಸೆ.24ರಂದು ಇಡ್ಕಿದು ಗ್ರಾಮದ ಮುಂಡ್ರಬೈಲ್ ನಲ್ಲಿ ನಡೆದಿತ್ತು.ಇಬ್ಬರು ಅಪ್ರಾಪ್ತ ಬಾಲಕರು ಹಾಗೂ ಸಾಹಿಲ್ ಎಂಬಾತ ಮುಂಡ್ರಬೈಲ್ ನಲ್ಲಿ ನಿಂತಿದ್ದ ವೇಳೆ ಸಾರ್ವಜನಿಕರು,ಗಾಂಜಾ ಸೇವನೆಯ ಆರೋಪದಲ್ಲಿ ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದರು. ತನಿಖೆ ನಡೆಸಿದ ವೇಳೆ ಗಾಂಜಾ ಸೇವನೆ ಮಾಡಿರುವುದು ದೃಡಪಡದ ಹಿನ್ನೆಲೆಯಲ್ಲಿ ಆ ಮೂವರಿಗೂ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇಬ್ಬರು ಅಪ್ರಾಪ್ತರ ಸಹಿತ ಮೂವರು ಗಾಂಜಾ ಸೇವನೆ ಮಾಡಿ‌ ಕಿರುಕುಳ ನೀಡುತ್ತಿದ್ದರು ಎಂದು ಆರಂಭದಲ್ಲಿ ಸುದ್ದಿಯಾಗಿತ್ತು.

ನಮ್ಮ ಮನೆಯ ಮಕ್ಕಳು ಯಾವುದೇ ಮಾದಕ ವಸ್ತುಗಳನ್ನು ಸೇವನೆ ಮಾಡಿರುವುದಿಲ್ಲ. ಸುಖಾ ಸುಮ್ಮನೆ ನಮ್ಮ ಮಕ್ಕಳ ಮೇಲೆ ಆರೋಪ ಮಾಡಲಾಗಿದೆ ಎಂದು ಅಪ್ರಾಪ್ತ ಬಾಲಕರ ಪೋಷಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here