ಪುತ್ತೂರು: ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೆ.15 ರಂದು 2023 ರ ಸಾಲಿನ ಹೆತ್ತವರ ಪ್ರಥಮ ಸಭೆ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರಮೀಳಾ ಜೆಸ್ಸಿ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಮೂಲ ಸೌಕರ್ಯಗಳಾದ, ಕೊಠಡಿಗಳು, ಆಟದ ಮೈದಾನ ಮುಂತಾದವುಗಳ ಕೊರತೆಯಿದ್ದರೂ ಸಂಸ್ಥೆಯು ಕಳೆದ ಶೈಕ್ಷಣಿಕ ವರ್ಷಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದು ಮುಂಬರುವ ದಿನಗಳಲ್ಲಿ, ಇನ್ನೂ ಸಾಧನೆಯ ಗುರಿಯಿದೆ. ಇದಕ್ಕೆ ಹೆತ್ತವರ, ದಾನಿಗಳ, ಕಾಲೇಜು ಅಭಿವೃದ್ಧಿ ಸಮಿತಿಯ ಸಂಪೂರ್ಣ ಬೆಂಬಲ ಬಯಸುತ್ತೇನೆ ಎಂದು ಹೇಳಿದರು.
ಕಾಲೇಜಿನ ಕಾರ್ಯಾಧ್ಯಕ್ಷೆ ಮಲ್ಲಿಕಾ ಜೆ ರೈ ಮಾತನಾಡಿ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹೆಚ್ಚು ಒತ್ತು ನೀಡಿ ಅವರನ್ನು ಜವಾಬ್ದಾರಿಯುತವಾಗಿ ವಿದ್ಯೆಯೊಂದಿಗೆ ವಿನಯವಂತರಾಗಿಸಲು ನಾವೆಲ್ಲಾ ಶ್ರಮಿಸೋಣ ಎಂದರು. ಅತಿಥಿಗಳಾಗಿದ್ದ ಕೌನ್ಸಿಲರ್ ಇಂದಿರಾ ಪುರುಷೋತ್ತಮ, ಸಮಾಜಸೇವಕ ದಿನೇಶ್ ಕಾರಂತ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವಿದ್ಯಾರ್ಥಿನಿಯರಾದ ಪವಿತ್ರ, ಭೂಮಿಕ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಭೋಜರಾಜ ಆಚಾರಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.