ಸೆ.28: ಪುತ್ತೂರಿನಲ್ಲಿ ವ್ಯವಹಾರಿಕ ಸಂಘಟನೆ ಜೆಕಾಂ ಪುತ್ತೂರು ಟೇಬಲ್ 1.0 ಉದ್ಘಾಟನೆ

0

ಪುತ್ತೂರು: ಎಲ್ಲಾ ವಿವಿಧ ರೀತಿಯ ಉದ್ಯಮಗಳು ಸೇರಿಕೊಂಡು ವ್ಯವಹಾರಿಕವಾಗಿರುವ ಸಂಘಟನೆಯೊಂದು ಪುತ್ತೂರಿನಲ್ಲಿ ಆರಂಭಗೊಂಡಿದ್ದು, ಇದರ ಉದ್ಘಾಟನೆ ಕಾರ್ಯಕ್ರಮ ಸೆ.28ರಂದು ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಹವಾನಿಯಂತ್ರಿತ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.


ಜೆಕಾಂ ವಲಯ 15ರ ಅಧ್ಯಕ್ಷ ಶಶಿರಾಜ್ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳುವ ದೃಷ್ಠಿಯಿಂದ ಹೆಚ್ಚು ಜನರ ಸಂಪರ್ಕ ಪರಸ್ಪರ ಪರಿಚಯ ಮುಖ್ಯ ಆಗಿರುತ್ತದೆ. ಇದರಿಂದ ಉದ್ಯಮಗಳಲ್ಲಿ ಯಶಸ್ಸು ಕಾಣಬಹುದಾಗಿದೆ ಈ ನಿಟ್ಟಿನಲ್ಲಿ ಜೆಸಿಐ ಭಾರತ ಇದರ ಅಂಗಸಂಸ್ಥೆಯಾಗಿ ಜೆಕಾಂ ಅನ್ನು ಅಸ್ತಿತ್ವಕ್ಕೆ ತಂದಿದೆ. ಕಳೆದ ಒಂದು ವರ್ಷದಿಂದ ಭಾರತ ಎಲ್ಲಾ ಉದ್ಯಮಿಗಳ ವ್ಯವಹಾರವನ್ನು, ವ್ಯಾಪಾರ ವಹಿವಾಟು ವೃದ್ಧಿಸಿಕೊಳ್ಳಲು ಒಂದು ವ್ಯವಸ್ಥೆಯಾಗಿ ಮೂಡಿ ಬಂದಿದೆ. ಪುತ್ತೂರಿನಲ್ಲಿ ಎಲ್ಲಾ ಸಮಾನ ಮನಸ್ಕ ಉದ್ದಿಮೆದಾರರು ಸೇರಿಕೊಂಡು ಮಾಡಿದ ಜೆಕಾಂ ಪುತ್ತೂರು ಟೇಬಲ್ 1.0 ಎಂಬ ಹೆಸರಿನಲ್ಲಿ ಆರಂಭಿಸಿದ್ದೇವೆ. ಇದರ ಉದ್ಘಾಟನಾ ಕಾರ್ಯಕ್ರಮ ಸೆ.28ರಂದು ನಡೆಯಲಿದೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಅವರು ಜೆಕಾಂ ಪುತ್ತೂರು ಟೇಬಲ್ 1.0 ಅನ್ನು ಉದ್ಘಾಟಿಸಿ ವ್ಯವಹಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇದರ ಪದಪ್ರದಾನ ಕಾರ್ಯಕ್ರಮವನ್ನು ಜೆಕಾಂನ ರಾಷ್ಟ್ರೀಯ ಉಪಾಧ್ಯಕ್ಷ ವಿ.ಬ್ರಾಬು ಅವರು ನೆರವೇರಿಸಲಿದ್ದಾರೆ. ಜೆಸಿಐ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.


ಉದ್ಯಮಿಗಳ ಸಂಘಟೆಯಾಗಿ ಜೆಕಾಂ ಕಾರ್ಯ:
ಜೆ ಸಿ ಸದಸ್ಯರ ವ್ಯವಹಾರವನ್ನು ಮತ್ತಷ್ಟು ವೃದ್ಧಿಗೊಳಿಸಲು ಕೆಲವೊಂದು ವ್ಯವಹಾರಿಕ ಸಂಬಂಧಗಳ ವಿಷಯದ ಕುರಿತು ಜೆ ಸಿ ಸಂಸ್ಥೆಯು ನಿರಂತರ ಮಾರ್ಗದರ್ಶನ ನೀಡುವ ವಿಶೇಷ ಶಿಬಿರಗಳನ್ನು ಆಯೋಜಿಸುತ್ತದೆ. ಜೆಕಾಂ ಎಂಬುದು ಉದ್ಯಮಿಗಳ ಸಂಘಟನೆಯಾಗಿ ಯಾವೆಲ್ಲ ಉದ್ಯಮಗಳು ಮತ್ತು ಉದ್ಯಮದಲ್ಲಿ ಪ್ರಗತಿಯನ್ನು ಹೇಗೆ ಕಾಣಬಹುದು ಮತ್ತು ಉದ್ಯಮದಲ್ಲಿ ಬರುವ ಸಂಕಷ್ಟವನ್ನು ಹೇಗೆ ಎದುರಿಸಬಹುದು ಎಂಬುದನ್ನು ಮನಗಾನಬಹುದು. ಈಗಾಗಲೇ ಪುತ್ತೂರಿನಲ್ಲಿ 22 ಮಂದಿ ಸದಸ್ಯತ್ವದ ಒಂದು ಟೀಮ್ ಆಗಿದೆ. ಇದಕ್ಕೆ ಇನ್ನೂ 15 ಉದ್ದಿಮೆಗಳು ಸೇರ್ಪಡೆಯಾಗಲಿದೆ. ಇಲ್ಲಿ ಉದ್ಯಮದ ಕುರಿತು ತರಬೇತಿಯೂ ನೀಡಲಾಗುತ್ತದೆ. ವ್ಯವಹಾರ ನಮ್ಮೊಳಗೆ ಹಂಚಿಕೊಂಡು ಉದ್ಯಮವನ್ನು ಎತ್ತರಕ್ಕೆ ಕೊಂಡೊಯ್ಯುವುದು ಮತ್ತು ಕ್ರೀಯಾಶೀಲತೆ ಪಡೆದು ಕೊಳ್ಳವುದು ಮುಖ್ಯ ಉದ್ದೇಶ. ಇದರ ಸದಸ್ಯರಾಗುವವರು ಬೇರೆ ಬೇರೆ ಉದ್ಯಮೆದಾರರು. ಇಲ್ಲಿ ಸ್ಪರ್ಧೆಯಿಲ್ಲ. ಒಕಲ್ ಫಾರ್ ಲೋಕಲ್ ಮಾದರಿಯಲ್ಲಿ ವ್ಯವಹಾರ ನಡೆಯುತ್ತದೆ. ಇದರ ಪ್ರಯೋಜನವನ್ನು ಪುತ್ತೂರಿನ ವ್ಯವಹಾರ ಉದ್ದಿಮೆದಾರರು ಪಡೆಯುವಂತೆ ಶಶಿರಾಜ್ ವಿನಂತಿಸಿದರು.


ಭಾರತದ್ಯಾಂತ ವ್ಯವಹಾರ:
ಜೆಕಾಂ ವ್ಯವಹಾರ ಭಾರತದ್ಯಾಂತ ನಡೆಯಲಿದೆ. ಒಂದು ಟೇಬಲ್‌ನಲ್ಲಿ ಇಂತಿಷ್ಟೇ ಸಂಖ್ಯೆ ಸದಸ್ಯರಿದ್ದಾಗ ಮತ್ತೊಂದು ಟೇಬಲ್ ಮಾಡುತ್ತೇವೆ. ಅದೇ ರೀತಿ ಭಾರತದ್ಯಾಂತ ಈ ಟೇಬಲ್ ಹಂಚಿಕೊಂಡಿದ್ದು, ಎಲ್ಲರ ಸಂಪರ್ಕ ದೊರೆಯುತ್ತದೆ. ಗ್ರಾಹಕರಿಗೆ ಡೋರ್ ಸ್ಟೆಪ್ ವ್ಯವಸ್ಥೆಯು ಇಲ್ಲಿ ಮಾಡಲಾಗುತ್ತದೆ ಎಂದು ಜೆಕಾಂ ಪುತ್ತೂರು ಟೇಬಲ್ 1.0 ದ ಅಧ್ಯಕ್ಷ ಅನೂಪ್ ಕೆ.ಜೆ ಮತ್ತು ಕಾರ್ಯದರ್ಶಿ ಮಾಲಿನಿ ಕಶ್ಯಪ್ ಮಾಹಿತಿ ನೀಡಿದರು. ವ್ಯವಹಾರ ವೃದ್ಧಿಸುವ ನಿಟ್ಟಿನಲ್ಲಿ ಇದೇ ತರಹದ ಟೇಬಲ್‌ಗಳು ಭಾರತದಾದ್ಯಂತ ಇರುವಾಗ ಅವರ ಜೊತೆ ಇಂಟರ್‌ಕನೆಕ್ಟ್ ಆಗಲು ಎಪ್ಲಿಕೇಶನ್ ಆಪ್ ಇದೆ. ಉದ್ಯಮಿದಾರು ಆಪ್ ಕನೆಕ್ಟ್ ಆಗುವ ಮೂಲಕ ವ್ಯವಹಾರ ವೃದ್ಧಿಸಬಹುದು ಎಂದು ಜೆಕಾಂ ಪುತ್ತೂರು ಟೇಬಲ್ 1.0 ಇದರ ಸುಹಾಸ್ ಅವರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here