ಪುತ್ತೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇವರ ಸಹಯೋಗದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಕಾಲು ಬಾಯಿ ರೋಗ ಲಸಿಕಾ ಅಭಿಯಾನವು ಸೆ.26ರಂದು ಪ್ರಗತಿಪರ ಕೃಷಿಕ ಕಾವು ದಿವ್ಯನಾಥ ಶೆಟ್ಟಿಯವರ ಆದಿಸ್ ಫಾರ್ಮ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಮಾತನಾಡಿ, ಜಾನುವಾರುಗಳ ಸುರಕ್ಷಿತ ಆರೋಗ್ಯಕ್ಕಾಗಿ ಕಾಲು ಬಾಯಿ ಲಸಿಕೆ ನೀಡಲಾಗುತ್ತಿದ್ದು ಇದರಲ್ಲಿ ಯಾರೂ ಅಸಡ್ಡೆ ಮಾಡಬಾರದು. ಅಸಡ್ಡ ಮಾಡಿದರೆ ಎಲ್ಲವನ್ನೂ ಕಳೆದುಕೊಳ್ಖಲಿದದ್ದೇವೆ. ಕಾಲು ಬಾಯಿ ರೋಗಕ್ಕೆ ಬೇರೆ ಔಷದಿಗಳಿಲ್ಕ. ಹೀಗಾಗಿ ಪ್ರತಿಯೊಬ್ಬ ಜಾನುವರು ಮ್ಹಾಲಕರು ತಮ್ಮ ಜಾನುವಾರುಗಳಿಗೆ ಲಸಿಕೆ ಮಾಡಿಸಿಕೊಳ್ಳಬೇಕು ಎಂದರು. ಹೈನುಗಾರಿಕೆಯಲ್ಲಿ ಲಾಭವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಎಲ್ಲವನ್ನು ಆರ್ಥಿಕತೆಯ ಮೂಲವನ್ನಾಗಿ ನೋಡಬಾರದು. ಹೀಗೆ ಮುಂದುವರಿದರೆ ಸಾಕು ಪ್ರಾಣಿ ಮತ್ತು ಮನುಷ್ಯರ ನಡುವಿನ ಪ್ರೀತಿ ಕಡಿಮೆಯಾಗುತ್ತದೆ. ಮನೆ ಸದಸ್ಯರಂತೆ ದನಗಳನ್ನು ಸಾಕಬೇಕು. ಪ್ರೀತಿ ವಿಶ್ವಾದಿಂದ ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಮನೆ ಮನೆಗಳಿಗೆ ತೆರಳಿ ಲಸಿಕೆ ವಿತರಿಸಲಾಗುತ್ತುದ್ದು ಸರಕಾರದ ಯೋಜನೆಯನ್ನು ಗ್ರಾಮೀಣ ಪ್ರದೇಶದ ಎಲ್ಲಾ ಭಾಗಗಳಿಗೆ ತಲುಪಿಸಲಾಗುತ್ತಿದೆ. ದನಗಳಿಗೆ ಕಾಯಿಲೆ ಬರುವ ಮೊದಲೇ ಎಚ್ಚೆತ್ತಿಕೊಂಡು ಲಸಿಕೆ ಹಾಕಿಸಿಕೊಳ್ಳಬೇಕು. ಮುಂಜಾಗ್ರತಾಕ್ರಮವಾಗಿ ಲಸಿಕೆ ವಿತರಸಿಉವ ಮೂಲಕ ಪಶುಗಳಿಗೆ ಮಾನವರಂತೆ ಮಾನ್ಯತೆಯಿದೆ ಎಂಬುದನ್ನುಸರಕಾರ ಸಾಬೀತು ಪಡಿಸಿದೆ. ಇಲಾಖೆಯು ಮುತುವರ್ಜಿಯಿಂದ ಕೆಲಸ ಮಾಡುವ ಮುಖಾಂತರ ಶಾಸಕರ ಜೊತೆಗೆ ಹೆಚ್ಚಿನ ಅನುದಾನ ತರುವ ಪ್ರಯುತ್ನ ಮಾಡುತ್ತಿದ್ದಾರೆ. ಪುತ್ತೂರಿನಲ್ಲಿ ಕೊರತೆಯಿರುವ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಾಸಕರ ಮೂಲಕ ಪ್ರಯತ್ನಿಸಲಾಗುವುದು ಎಂದರು.
ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಲಸಿಕೆಯ ಮೂಲಕ ರೋಗ ನಿಯಂತ್ರಣ ಸಾಧ್ಯ. ಎಲ್ಲರೂ ಮಾಡಿಸಿಕೊಂಡಾಗ ರೋಗ ನಿಯಂತ್ರಣ ಇನ್ನು ಎರಡು ಮೂರು ಸುತ್ತಿನಲ್ಲಿ ಲಸಿಕೆ ಸ್ಥಗಿತವಾಗಲಿದೆ. ಪ್ರತಿಯೊಬ್ಬರೂ ಲಸಿಕೆ ಮಾಡಿಸಿಕೊಂಡು ಸಹಕರಿಸಬೇಕು.
ಪಶು ಸಂಗೋಪನಾ ಇಲಾಖೆಯ ಡಾ. ಧರ್ಮಪಾಲ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಿಂದ ನಾಲ್ಕನೇ ಸುತ್ತಿನ ಲಸಿಕೆ, ರಾಜ್ಯದಾದ್ಯಂತ ಉದ್ಘಾಟನೆಗೊಂಡು ಒಂದು ತಿಂಗಳು ಕಾಲ ನಿರಂತರವಾಗಿ ಲಸಿಕೆ ವಿತರಣೆ ನಡೆಯಲಿದೆ. ಒಂದು ಜಾನುವಾರುಗಳಿಗೆ ವರ್ಷದಲ್ಲಿ ಎರಡು ಬಾರಿ ಲಸಿಕೆ ವಿತರಿಸಲಾಗುತ್ತಿದೆ. ಇದು ದೇಶದಾದ್ಯಂತ ನಡೆಯುವ ಕಾರ್ಯಕ್ರಮವಾಗಿದೆ. ಲಸಿಕೆ ವಿತರಣೆಗೆ ಒಂಬತ್ತು ತಂಡಗಳು, ಇಲಾಖೆ ಸಿಬಂದಿಗಳು ಜೊತೆಗೆ ಒಕ್ಕೂಟದ ಸಿಬಂದಿಗಳು, ಪಶುಸಖಿಯರ ಸಹಕಾರದಲ್ಲಿ ಲಸಿಕೆ ವಿತರಣೆಯು ನಡೆಯುತ್ತಿದ್ದು ಪ್ರತಿ ಜಾನುವಾರು ಮಾಲಕರು ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸಿದರು.
ಅರಿಯಡ್ಕ, ಮಾಡ್ನೂರು ಗ್ರಾಮಗಳು ಪಶ ಸಂಗೋಪನಾ ಇಲಾಖೆಯಲ್ಲಿ ಭೌಗೋಳಿಕವಾಗಿ ಪಾಣಾಜೆ ಕೇಂದ್ರದ ವ್ಯಾಪ್ತಿಯಲ್ಲಿದೆ. ಇದರಿಂದ ಗ್ರಾಮದವರಿಗೆ ಸಮಸ್ಯೆ ಉಂಟಾಗುತ್ತಿದ್ದು ಮಾಡ್ನೂರು ಗ್ರಾಮವನ್ನು ಕೊಳ್ತಿಗೆ ಕೇಂದ್ರದ ವ್ಯಾಪ್ತಿಗೆ ಸೇರಿಸಬೇಕು. ಹಾಗೂ ಅಲ್ಲಿಗೆ ಖಾಯಂ ವೈದ್ಯರನ್ನು ನೇಮಿಸುವಂತೆ ಪ್ರಗತಿ ಪಗತಿ ಪರ ಕೃಷಿಕ ದಿವ್ಯನಾಥ ಶೆಟ್ಟಿ ಆಗ್ರಹಿಸಿದರು.
ಸನ್ಮಾನ:
ದಿವ್ಯನಾಥ ಶೆಟ್ಟಿಯವರು ಹೈನುಗಾರಿಕೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಕಾರಣಿಕರ್ತರಾದ ಕೃಷ್ಣ, ಆಲ್ಬರ್ಟ್, ವನಿತಾರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದಿವ್ಯನಾಥ ಶೆಟ್ಟಿಯವರ ಪತ್ನಿ ಸುರೇಖಾ ಸನ್ಮಾನಿತರ ಪರಿಚಯ ಮಾಡಿದರು.
ಕಾವು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್ ಕೊಚ್ಚಿ, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಪಾವನರಾಮ್ ಮಾತನಾಡಿ ಶುಭ ಹಾರೈಸಿದರು. ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿನೇಶ್ ಯಾದವ್ ಪ್ರಾರ್ಥಿಸಿದರು. ಪ್ರಗತಿ ಪರ ಕೃಷಿಕ ದಿವ್ಯನಾಥ ಶೆಟ್ಟಿ ಸ್ವಾಗತಿಸಿದರು. ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಗೌಡ ವಂದಿಸಿದರು. ದೇವಣ್ಣ ರೈ ಕಾರ್ಯಕ್ರಮ ನಿರೂಪಿಸಿದರು. ದ.ಕ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಅನುದೀಪ್, ಪಶು ಸಂಗೋಪನಾ ಇಲಾಖೆಯ ಡಾ. ಎಂ.ಪಿ ಪ್ರಕಾಶ್, ಪ್ರಶಾಂತ್, ದೀಪಿಕಾ, ವೀರಪ್ಪ, ಬಸವರಾಜ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.