ಡ್ರಗ್ಸ್ ಮುಕ್ತ ಗ್ರಾಮದ ಸ್ಟಿಕ್ಕರ್ ಬಿಡುಗಡೆ

0

ಉಪ್ಪಿನಂಗಡಿ: ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘ ಉಪ್ಪಿನಂಗಡಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಪ್ಪಿನಂಗಡಿ ಹಾಗೂ ಉಪ್ಪಿನಂಗಡಿ ಪರಿಸರದ ಹಲವಾರು ಸಮಾಜ ಮುಖಿ ಸಂಘಟನೆಗಳ ಜಂಟಿ ಆಶ್ರಯದಲ್ಲಿ ‘ಡ್ರಗ್ಸ್ ಮುಕ್ತ ಗ್ರಾಮ’ ಜನಜಾಗೃತಿ ಅಭಿಯಾನವು ಉಪ್ಪಿನಂಗಡಿಯಲ್ಲಿ ಅ.2ರಂದು ನಡೆಯಲಿದ್ದು, ಇದರ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಅ.2ರಂದು ಬೆಳಗ್ಗೆ 10ಕ್ಕೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಿಂದ ಅಭಿಯಾನದ ಜನಜಾಗೃತಿ ಜಾಥಾ ನಡೆಯಲಿದ್ದು, ಈ ಜಾಥಾವು ಗಾಂಧಿಪಾರ್ಕ್‌ತನಕ ಸಾಗಿ ಬಳಿಕ ಹೊಸ ಬಸ್ ನಿಲ್ದಾಣಕ್ಕೆ ಬಂದು ಸಮಾಪ್ತಿಗೊಳ್ಳಲಿದೆ. ಉಪ್ಪಿನಂಗಡಿ ಪರಿಸರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ, ಧಾರ್ಮಿಕ, ಸಾಮಾಜಿಕ ಮುಖಂಡರಿಂದ ಜಾಗೃತಿ ಸಂದೇಶ ಭಾಷಣ ನಡೆಯಲಿದೆ.

LEAVE A REPLY

Please enter your comment!
Please enter your name here