ರಿಕ್ಷಾ ನಿಲುಗಡೆಗೆ ಗ್ರಾಮಸ್ಥ ಆಟೋ ಚಾಲಕರಿಗೆ ಅವಕಾಶಕ್ಕಾಗಿ ಮನವಿ

0

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯಿರುವ ರಿಕ್ಷಾ ನಿಲ್ದಾಣದಲ್ಲಿ ಉಪ್ಪಿನಂಗಡಿ ಗ್ರಾಮಸ್ಥರು ಹಾಗೂ ಗ್ರಾ.ಪಂ.ನ ಮತದಾರರಾಗಿರುವ ಆಟೋ ಚಾಲಕರಿಗೆ ಆಟೋ ರಿಕ್ಷಾಗಳನ್ನು ನಿಲ್ಲಿಸಲು ಅವಕಾಶವನ್ನು ನೀಡಬೇಕೆಂದು ಉಪ್ಪಿನಂಗಡಿ ಗ್ರಾಮದ ಆಟೋ ರಿಕ್ಷಾ ಚಾಲಕರು ಉಪ್ಪಿನಂಗಡಿ ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ.

ಉಪ್ಪಿನಂಗಡಿಯಲ್ಲಿ ಈಗಾಗಲೇ ಗ್ರಾ.ಪಂ. ನಾಲ್ಕು ಆಟೋ ರಿಕ್ಷಾ ನಿಲ್ದಾಣವನ್ನು ಗುರುತಿಸಿದ್ದು, ಈ ನಿಲ್ದಾಣಗಳಲ್ಲಿ ಬೇರೆ ಬೇರೆ ಗ್ರಾಮದವರು ಬಂದು ಆಟೋ ರಿಕ್ಷಾಗಳನ್ನು ನಿಲ್ಲಿಸುತ್ತಿದ್ದಾರೆ. ಉಪ್ಪಿನಂಗಡಿ ಗ್ರಾಮಸ್ಥರು ಹಾಗೂ ಮತದಾರರಾದ ಸುಮಾರು 120 ರಿಕ್ಷಾ ಚಾಲಕರಿದ್ದಾರೆ. ಆದ್ದರಿಂದ ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯಿರುವ ರಿಕ್ಷಾ ನಿಲ್ದಾಣದಲ್ಲಿ ಉಪ್ಪಿನಂಗಡಿ ಗ್ರಾಮಸ್ಥರು ಹಾಗೂ ಗ್ರಾ.ಪಂ.ನ ಮತದಾರರಾಗಿರುವ ಆಟೋ ಚಾಲಕರಿಗೆ ಅಟೋ ರಿಕ್ಷಾಗಳನ್ನು ನಿಲ್ಲಿಸಲು ಅವಕಾಶವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮನವಿ ನೀಡಿದ ನಿಯೋಗದಲ್ಲಿ ಆಟೋ ಚಾಲಕರಾದ ರಾಘವೇಂದ್ರ ನಟ್ಟಿಬೈಲು, ಅಬ್ದುಲ್ ಮಜೀದ್ ರಾಮನಗರ, ನರಸಿಂಹ ಶೆಟ್ಟಿ ಕಜೆಕ್ಕಾರ್, ಹಾರೂನ್ ಪೆರಿಯಡ್ಕ, ರಾಜೇಶ್ ಮಂಜುಶ್ರೀ ಪೆರಿಯಡ್ಕ, ರಝಾಕ್ ಮಠ, ಕೇಶವ ನಿನ್ನಿಕಲ್ಲ್, ಅಮೀರ್ ಕೊಪ್ಪಳ, ಹೈದರ್ ಮಠ, ಬಶೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here