ಪುತ್ತೂರು: ಪುಣಚ ಮಿಲಾದ್ ಫೆಸ್ಟ್ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಂದ ಮಿಲಾದ್ ಎಕ್ಸ್ಪೋ ನಡೆಯಿತು. ಸಫಾ-ಮರ್ವಾ ಎನ್ನುವ ಎರಡು ತಂಡಗಳಾಗಿ ನಡೆದ ಎಕ್ಸ್ಪೋ ನೋಡುಗರ ಗಮನ ಸೆಳೆಯಿತು. ಹಳೆಯ ಕಾಲದ ಗೃಹೋಪಯೋಗಿ ವಸ್ತುಗಳು ಹಾಗೂ ವಿದ್ಯಾರ್ಥಿಗಳ ಕೈಯಿಂದ ಮೂಡಿಬಂದ ವಿವಿಧ ಕಲಾಕೃತಿಗಳು ಆಕರ್ಷಣೀಯವಾಗಿ ಜೋಡಿಸಲಾಗಿತ್ತು. ನೂರಾರು ಮಂದಿ ಆಗಮಿಸಿ ಎಕ್ಸ್ಪೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಫಾ ತಂಡದ ವಸ್ತು ಸಂಗ್ರಹಾಲಯದ ಉದ್ಘಾಟನೆಯನ್ನು ಪುಣಚ ಮುಹಿಯ್ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್ ಹಮೀದ್ ಪುಣಚ ಹಾಗೂ ಮರ್ವಾ ತಂಡದ ಉದ್ಘಾಟನೆಯನ್ನು ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಮಾಳಿಗೆ ನೆರವೇರಿಸಿದರು.ಪುಣಚ ಜುಮಾ ಮಸೀದಿ ಖತೀಬ್ ಬಿ.ಎಂ ಮುಹಮ್ಮದ್ ದಾರಿಮಿ ದುವಾಶೀರ್ವಚನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಮಾಅತ್ ಕಮಿಟಿ ಉಪಾಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಪ್ರಧಾನ ಕಾರ್ಯದರ್ಶಿ ಹಾಜಿ ಮೂಸ ಕುಂಜೂರು, ಕೋಶಾಧಿಕಾರಿ ಅಶ್ರಫ್ ನಟ್ಟಿ, ಸದಸ್ಯರಾದ ಶಾಫಿ ಮಾಳಿಗೆ, ಪರಿಯಳ್ತಡ್ಕ ಜುಮಾ ಮಸೀದಿ ಖತೀಬ್ ಹಸೈನಾರ್ ಪೈಝಿ, ಸದರ್ ಉಸ್ತಾದ್ ರಝ್ವಿ, ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮುಹಮ್ಮದ್, ಮದ್ರಸ ಮ್ಯಾನೇಜ್ಮೆಂಟ್ ದ.ಕ ಜಿಲ್ಲಾ ಅಧ್ಯಕ್ಷ ಮೊಯಿದೀನ್ ಹಾಜಿ ಅಡ್ಡೂರು, ಪ್ರ.ಕಾರ್ಯದರ್ಶಿ ಹಾಜಿ ರಫೀಕ್ ಕೊಡಾಜೆ, ಪುತ್ತೂರು ರೇಂಜ್ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಅಝೀಝ್ ಬಪ್ಪಳಿಗೆ, ಮಿತ್ತಬೈಲು ರೇಂಜ್ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಇಕ್ಬಾಲ್ ಮಿತ್ತಬೈಲು, ಪರಂಗಿಪೇಟೆ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ಹಸನಬ್ಬ ಶುಭ ಹಾರೈಸಿದರು.
ಪಾಲಸ್ತಡ್ಕ ಮಸೀದಿ ಇಮಾಂ ಅಬ್ದುಲ್ ಸಲಾಂ ಇರ್ಪಾನಿ, ಪುಣಚ ಜುಮಾ ಮಸೀದಿ ಕಾರ್ಯದರ್ಶಿ ಪುತ್ತುಚ್ಚ, ಜಮಾಅತ್ ಸದಸ್ಯರಾದ ಇಸ್ಮಾಯಿಲ್ ಪಾಲಸ್ತಡ್ಕ, ಇಸ್ಮಾಯೀಲ್ ಕಲ್ಲಾಜೆ, ಅಬೂಬಕರ್ ಸಿದ್ದೀಕ್ ಕಲ್ಲಾಜೆ, ರಝ್ಹಾಕ್ ಪಾಲಸ್ತಡ್ಕ ಉಪಸ್ಥಿತರಿದ್ದರು.ಪುಣಚ ಮದ್ರಸ ಸದರ್ ಉಸ್ತಾದ್ ಇಬ್ರಾಹಿಂ ಕೌಸರಿ ಸ್ವಾಗತಿಸಿದರು. ಸಹ ಅಧ್ಯಾಪಕ ಸುಲೈಮಾನ್ ಮುಸ್ಲಿಯಾರ್ ವಂದಿಸಿದರು.