ಉಪ್ಪಿನಂಗಡಿಯಲ್ಲಿ ನೆಬಿ ದಿನ ರ‍್ಯಾಲಿ

0

ಉಪ್ಪಿನಂಗಡಿ: ಇಲ್ಲಿನ ಮಾಲಿಕುದ್ದೀನಾರ್ ಜುಮಾ ಮಸೀದಿಯ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ)ರವರ ಜನ್ಮದಿನಾಚರಣೆಯ ಪ್ರಯುಕ್ತ ಮೀಲಾದ್ ರ‍್ಯಾಲಿ ಮತ್ತು ಸಭಾ ಕಾರ್ಯಕ್ರಮ ನಡೆಯಿತು.


ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ್ ನೇತೃತ್ವದಲ್ಲಿ ಮೌಲೀದ್ ಪಾರಾಯಣ ಮತ್ತು ದುವಾ ನೆರವೇರಿತು. ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಎಚ್. ಯೂಸುಫ್ ಹಾಜಿ, ಕಾರ್ಯದರ್ಶಿ ಶುಕೂರ್ ಹಾಜಿ ಶುಕ್ರಿಯಾ, ಉಪ ಕಾರ್ಯದರ್ಶಿ ರವೂಫ್ ಹಾಜಿ ಯು.ಟಿ., ಕೋಶಾಧಿಕಾರಿ ಮುಸ್ತಾಫ ಡಬಲ್‌ಫೋರ್, ಉಪಾಧ್ಯಕ್ಷರಾದ ಹಾರೂನ್ ಹಾಜಿ ಅಗ್ನಾಡಿ, ಅಶ್ರಫ್ ಹಾಜಿ ಸಿಟಿ ಫ್ಯಾನ್ಸಿ, ಸದಸ್ಯರಾದ ಮುನೀರ್ ಎನ್ಮಾಡಿ, ಯೂಸುಫ್ ಎನ್ಮಾಡಿ, ಸಿದ್ದೀಕ್ ಕೆಂಪಿ, ಪ್ರಮುಖರಾದ ಶಬೀರ್ ಕೆಂಪಿ, ಮುಹಮ್ಮದ್ ತೌಸೀಫ್ ಯು.ಟಿ., ಇರ್ಷಾದ್ ಯು.ಟಿ., ಇಬ್ರಾಹೀಂ ಆಚಿ ಮತ್ತಿತರರು ಉಪಸ್ಥಿತರಿದ್ದರು. ರ‍್ಯಾಲಿಯಲ್ಲಿ ದಫ್, ಪ್ಲವರ್ ಶೋ, ಸ್ಕೌಟ್ಸ್ ತಂಡಗಳು ಪ್ರದರ್ಶನ ನೀಡಿದರು.

LEAVE A REPLY

Please enter your comment!
Please enter your name here