ಪುತ್ತೂರು: ʼಜೆಕಾಂ ಟೇಬಲ್-1.0 ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು: ವಿವಿಧ ರೀತಿಯ ಉದ್ಯಮಗಳನ್ನು ಒಳಗೊಂಡಿರುವ ವ್ಯವಹಾರಿಕ ಸಂಘಟನೆ `ಜೆಕಾಂ’ ಟೇಬಲ್-1.0 ಸೆ.28ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಹವಾನಿಯಂತ್ರಿತ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಮಾತನಾಡಿ, ಇಂದಿನ ವ್ಯವಹಾರದಲ್ಲಿ ಸಾಕಷ್ಟು ಸವಾಲುಗಳಿವೆ. ಸವಾಲುಗಳನ್ನು ಎದುರಿಸಿ ವ್ಯವಹಾರ ವೃದ್ಧಿಸಲು, ನ್ಯಾಯಯುತವಾದ ವ್ಯವಹಾರಕ್ಕೆ ಜೆಕಂ ಪ್ರೇರಣೆ ನೀಡಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡು ಬದ್ಧತೆ, ಪಾರದರ್ಶಕತೆ ಕಾಪಾಡಿಕೊಂಡಾಗ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ನೌಕರರು ಅವಿಭಾಜ್ಯ ಅಂಗ. ಮ್ಹಾಲಕರು ಮತ್ತು ನೌಕರರು ಸಮಾನವಾಗಿದ್ದಾಗ ವ್ಯವಹಾರ ವೃದ್ಧಿಸಲು ಸಹಕಾರಿಯಾಗಲಿದೆ. ಯುವ ಉದ್ಯಮಿಗಳಿಗೆ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವ ಜೆಕಂಗೆ ಅಭಿನಂದನೆ ಸಲ್ಲಿಸಿದರು.

ನೂತನ ಅಧ್ಯಕ್ಷರಿಗೆ ಪದಪ್ರದಾನ ಮಾಡಿದ ಜೇಸಿಐ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮಾತನಾಡಿ, ಯುವ ಜನತೆಗೆ ವ್ತಕ್ತಿತ್ವ ವಿಕಸನದ ತರಬೇತಿಯ ಜೊತೆಗೆ ಜೇಸಿಐ ಸದಸ್ಯರ ವ್ಯವಹಾರದ ಅಭಿವೃದ್ಧಿ ಪೂರಕ ಪ್ರೋತ್ಸಾಹ ನೀಡುತ್ತಿದೆ. 18-40 ವರ್ಷದವರು ವ್ಯವಹಾರದಲ್ಲಿ ತೊಡಗಿಸಿಕೊಂಡು, ವ್ಯವಹಾರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಜೇಕಂ ಭಾರತಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಮೌಲ್ಯ ಯುತವಾದ ವಯಸ್ಸಿನಲ್ಲಿ ಜೀವನದಲ್ಲಿ ಸಾಧನೆಗೆ ಭದ್ರ ಬುನಾದಿಗೆ ಜೆಕಂ ಸಹಕಾರಿಯಾಗಲಿದೆ. ವಿವಿಧ ಕ್ಷೇತ್ರದ ಉದ್ಯಮಿಗಳು ಒಟ್ಟು ಸೇರಲು ವ್ಯವಹಾರಗಳಲ್ಲಿರುವ ಸವಾಲುಗಳು ಪರಿಹರಿಸಿ, ಸವಾಲುಗಳನ್ನು ಮೆಟ್ಟಿ ನಿಂತು ವ್ಯವಹಾರ ವರ್ಷ ವೃದ್ದಿಸಲು ಸಹಕಾರಿಯಾಗಲಿದೆ. ವಲಯ 15ರ ಪ್ರಥಮ ಜೆಕಂ ಪುತ್ತೂರಿನಲ್ಲಿ ಪ್ರಾರಂಭಗೊಂಡಿದ್ದು ಯುವ ಉದ್ಯಮಿಗಳು ಅನುಭವವನ್ನು ಹಂಚಿಕೊAಡು ವ್ಯವಹಾರ ವೃದ್ದಿಸಲು, ಯುವ ಉದ್ಯಮಿಗಳ ವ್ಯವಹಾರ ವೃದ್ದಿಸಲು ಸಹಕಾರಿಯಾಗಲಿದೆ ಎಂದರು.

ಪದಪ್ರದಾನ:
ಜೆಕಂ ಪುತ್ತೂರು ಟೇಬಲ್-1ರ ಅಧ್ಯಕ್ಷ ಅನೂಪ್ ಕೆ.ಜೆಯವರಿಗೆ ಜೇಸಿಐ ವಲಯ 15 ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಯವರು ಪದಪ್ರದಾನ ಮಾಡಿದರು.
ಜೆಕಂ ವಲಯ 15ರ ಅಧ್ಯಕ್ಷ ಶಶಿರಾಜ್ ರೈ ಸ್ವಾಗತಿಸಿದರು. ವಿನಯ ಪ್ರಭು, ಸುಹಾಸ್ ಮರಿಕೆ, ಪಶುಪತಿ ಶರ್ಮ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜೆಕಂ ಪುತ್ತೂರು ಟೇಬಲ್-1ರ ಕಾರ್ಯದರ್ಶಿ ಮಾಲಿನಿ ಕಶ್ಯಪ್ ವಂದಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಜೆಕಂ ರಾಷ್ಟ್ರೀಯ ಉಪಾಧ್ಯಕ್ಷ ವಿ. ಬ್ರಾಬು ಆನ್ಲೈನ್ ಮೂಲಕ ಜೆಕಂನ ಉದ್ದೇಶ ಹಾಗೂ ಮಹತ್ವಗಳ ಬಗ್ಗೆ ವಿವರಿಸಿದರು. ಜೆಕಂ ಟೇಬಲ್-1ರ ಸದಸ್ಯರು ತಮ್ಮ ವ್ಯವಹಾರ, ಉದ್ಯಮಗಳು ಹಾಗೂ ತಮ್ಮಲ್ಲಿರುವ ಸೇವೆಗಳ ಕುರಿತು ಮಾಹಿತಿ ನೀಡಿದರು. ಹೆಡ್‌ಕೋಚ್ ದೀಪಕ್‌ರಾಜ್ ಸದಸ್ಯರಿಗೆ ಜೆಕಂನ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಜೆಕಂ ಅಧ್ಯಕ್ಷ ಅನೂಪ್ ಕೆ.ಜೆ, ಕಾರ್ಯದರ್ಶಿ ಮಾಲಿನಿ ಕಶ್ಯಪ್, ಉಪಾಧ್ಯಕ್ಷ ಪಶುಪತಿ ಶರ್ಮ, ಕೋಶಾಧಿಕಾರಿ ಸುಹಾಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here