ನಾಳೆ(ಅ.1) ಚಂದನ ವಾಹಿನಿಯಲ್ಲಿ ಸುಂದರ ರೈ ಮಂದಾರ ನಿರ್ದೇಶನದ ‘ಅಂಬರ ಮರ್ಲೆರ್’

0

ಚಿತ್ರ: ಅಂಬರ ಮರ್ಲೆರ್

ಪುತ್ತೂರು: ಅರ್ನ ಕ್ರಿಯೇಷನ್ಸ್ ಅರ್ಪಿಸುವ, ರಂಗಭೂಮಿ ಕಲಾವಿದ, ನಟ,ನಿರ್ದೇಶಕ ರಂಗ್‌ದ ರಾಜೆ ಸುಂದರ ರೈ ಮಂದಾರ ಕಥೆ,ನಿರ್ಮಾಣ,ಪ್ರಧಾನ ನಿರ್ದೇಶನದಲ್ಲಿ ಮೂಡಿಬಂದಿರುವ ತುಳು ಹಾಸ್ಯ ಧಾರಾವಾಹಿ ‘ ಅಂಬರ ಮರ್ಲೆರ್’ ಇದರ ಎರಡನೇ ಸಂಚಿಕೆ ಅ.1 ರಂದು ಮಧ್ಯಾಹ್ನ 1.3೦ ರಿಂದ 2 ಗಂಟೆಯವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಉದ್ಯಮಿ ಕುಂಬ್ರ ಮೋಹನದಾಸ ರೈ ಪ್ರಾಯೋಜಕತ್ವದಲ್ಲಿ ತಯಾರಾಗಿರುವ ಈ ಸಂಚಿಕೆಯು ಮೋಹನದಾಸ ರೈಯವರ ಮನೆ ಹಾಗೂ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಇದರಲ್ಲಿ ಮೋಹನದಾಸ ರೈಯವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ರಂಗಭೂಮಿ, ಸಿನಿಮಾ ಕಲಾವಿದರಾದ ಅರವಿಂದ್ ಬೋಳಾರ್, ನವೀನ್ ಡಿ, ಪಡೀಲ್, ದೀಪಕ್ ರೈ ಪಾಣಾಣೆ, ಪುಷ್ಪರಾಜ್ ಬೊಳ್ಳಾರ್, ಉಮೇಶ್ ಮಿಜಾರ್, ಸುಂದರ ರೈ ಮಂದಾರ ಸೇರಿದಂತೆ ಹಲವು ಮಂದಿ ಕಲಾವಿದರು ನಟಿಸಿದ್ದಾರೆ.

ಟಿಆರ್‌ಪಿ ಹೆಚ್ಚಿಸಿಕೊಂಡ ಚಂದನ ವಾಹಿನಿ
ದೂರದರ್ಶನ ಚಂದನ ವಾಹಿನಿಯು ಸದಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ತನ್ನದೇ ವೀಕ್ಷಕ ಬಳಗವನ್ನು ಹೊಂದಿದ್ದು ಇದೀಗ ತುಳು ಧಾರಾವಾಹಿಯನ್ನು ಪ್ರಸಾರ ಮಾಡುವ ಮೂಲಕ ತನ್ನ ವೀಕ್ಷಕ ಬಳಗವನ್ನು ಹೆಚ್ಚಿಸಿಕೊಳ್ಳುವ ಮೂಲಕ ಟಿಆರ್‌ಪಿಯನ್ನು ಕೂಡ ಹೆಚ್ಚಿಸಿಕೊಂಡಿದೆ.

LEAVE A REPLY

Please enter your comment!
Please enter your name here