





ಕಡಬ: ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲದ ವತಿಯಿಂದ ಸೇವಾ ಪಾಕ್ಷಿಕದ ಅಂಗವಾಗಿ ಇಂದು ಅ.1ರಂದು ಐನೆಕಿದು ಬಸ್ ನಿಲ್ದಾಣದ ಪರಿಸರದಲ್ಲಿ ಸ್ಚಚ್ಚತಾ ಕಾರ್ಯಕ್ರಮ ಯುವ ಮೋರ್ಚಾದ ಕಾರ್ಯಕರ್ತರಿಂದ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾದ ಸುಳ್ಯ ಮಂಡಲದ ಅಧ್ಯಕ್ಷರಾದ ಶ್ರೀಕೃಷ್ಣ ಎಂ.ಆರ್, ಪ್ರಧಾನ ಕಾರ್ಯದರ್ಶಿ ಮನುದೇವ್ ಪರಮಲೆ, ಉಪಾಧ್ಯಕ್ಷ ದಿಲೀಪ್ ಉಪ್ಪಳಿಕೆ, ನಿಸರ್ಗ ಯುವಕ ಮಂಡಲ ಐನೆಕಿದು ಇದರ ಅಧ್ಯಕ್ಷ ಬುಕ್ಷಿತ್ ನೀರ್ಪಡಿ ಹಾಗೂ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.












