ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾ.ಪಂ. ವತಿಯಿಂದ ಸ್ವಚ್ಛತೆಯೇ ಸೇವೆ’ ಅಭಿಯಾನದ ಅಂಗವಾಗಿ ಗಾಂಧಿ ಜಯಂತಿಯ ಮುನ್ನಾ ದಿನವಾದ ಅ. 1 ರಂದು ಬೆಟ್ಟಂಪಾಡಿ ಮತ್ತು ಇರ್ದೆ ಗ್ರಾಮದ ವಿವಿಧ ಕಡೆ ಸ್ವಚ್ಛತಾ ಕಾರ್ಯ ನಡೆಯಿತು. ಬೆಟ್ಟಂಪಾಡಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ, ಇರ್ದೆ ಜನತಾ ಕಾಲೋನಿ ಮತ್ತು ಬಸ್ ತಂಗುದಾಣದ ಬಳಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಸುರೇಶ್, ಉಪಾಧ್ಯಕ್ಷ ಮಹೇಶ್ ಕೆ., ಮಾಜಿ ಅಧ್ಯಕ್ಷೆ ಪವಿತ್ರ ಡಿ., ಸದಸ್ಯರಾದ ಪ್ರಕಾಶ್ ರೈ, ಗಂಗಾಧರ ಎಂ.ಎಸ್., ಲಲಿತಾ, ಪಿಡಿಒ ಸೌಮ್ಯ, ಕಾರ್ಯದರ್ಶಿ ಬಾಬು ನಾಯ್ಕ್, ಪಂಚಾಯತ್ ಸಿಬಂದಿಗಳು, ಆರೋಗ್ಯ ಆಶಾ ಕಾರ್ಯಕರ್ತೆಯರು, ಬೆಟ್ಟಂಪಾಡಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಪಾಲ್ಗೊಂಡರು.