ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ

0

ಕಡಬ: ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಪಂಚಾಯತ್ ಕಛೇರಿ ಆವರಣ, ಕಲ್ಲುಗುಡ್ಡೆಪೇಟೆ, ಬಸ್ ತಂಗುದಾಣ, ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಪೇಟೆ ಹಾಗೂ ರಾಜ್ಯ ರಸ್ತೆಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ ಅ.1ರಂದು ನಡೆಯಿತು.

ನೂಜಿಬಾಳ್ತಿಲ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ ಹಳೆನೂಜಿ, ಹಾಗೂ ಸದಸ್ಯರು, ಪಿಡಿಓ ಗುರುವ ಹಾಗೂ ಸಿಬ್ಬಂದಿ ವರ್ಗ, ತುಳುನಾಡ ತುಡರ್ ಯುವಕಮಂಡಲನೂಜಿಬೈಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೂಜಿಬಾಳ್ತಿಲ ಒಕ್ಕೂಟ, ಪಂಚ ಶ್ರೀ ಸಂಜೀವಿನಿ ಒಕ್ಕೂಟ, ನೂಜಿಬಾಳ್ತಿಲ ಮತ್ತು ರಂಜಿಲಾಡಿ ಸಿಎಚ್‌ಓ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನೂಜಿಬಾಳ್ತಿಲ ವಾಹನ ಚಾಲಕ ಮಾಲಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here