ಬಾಲ್ ಬಾಡ್ಮಿಂಟನ್- ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರ ತಂಡ ಜಿಲ್ಲಾ ಮಟ್ಟಕ್ಕೆ

0

ನಿಡ್ಪಳ್ಳಿ; ಸುಧಾನ  ವಸತಿಯುತ ಶಾಲೆ ಮಂಜಲ್ಪಡ್ಪು ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜರುಗಿದ ಪುತ್ತೂರು ತಾಲೂಕು ಮಟ್ಟದ ಬಾಲ್ ಬಾಡ್ಮಿಂಟನ್ ಪಂದ್ಯಾಟದಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ತಂಡದಲ್ಲಿ  10 ನೇ ತರಗತಿಯ ಧನ್ಯಶ್ರೀ, 10ನೇ ತರಗತಿಯ  ಲಿಖಿತಾಕುಮಾರಿ, 10ನೇ ತರಗತಿಯ ಅಂಕಿತಾ, 9ನೇ ತರಗತಿಯ  ಚಾಂದಿನಿ,  9ನೇ ತರಗತಿಯ ವೈಷ್ಣವಿ, 9ನೇ ತರಗತಿಯ ಸುಪ್ರೀತ,  8ನೇ ತರಗತಿಯ ಕಾವ್ಯ  ಭಾಗವಹಿಸಿರುತ್ತಾರೆ.ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ  ಚಂದ್ರಕಲಾ ಕೆ.ವಿ ತರಬೇತಿ ನೀಡಿದ್ದಾರೆ. ಎಂದು ಮುಖ್ಯಗುರು ವಿಜಯಕುಮಾರ್.ಎಂ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here