ವಿಟ್ಲ: ಮಾರ್ಬಲ್ ತುಂಬಿದ ಲಾರಿ ಪಲ್ಟಿ: ನಾಲ್ವರ ಪೈಕಿ ಇಬ್ಬರು ಗಂಭೀರ

0

ವಿಟ್ಲ: ಮಾರ್ಬಲ್ ತುಂಬಿಕೊಂಡು ಬಂದ ಲಾರಿಯೊಂದು ಪಲ್ಟಿಯಾಗಿ ಅದರಲ್ಲಿದ್ದ ನಾಲ್ವರ ಪೈಕಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಸಮೀಪ ನಡೆದಿದೆ.
ಮಾರ್ಬಲ್ ಅನ್ ಲೋಡ್ ಗಾಗಿ ಲಾರಿಯನ್ನು ರಿವರ್ಸ್ ತೆಗೆಯುವ ವೇಳೆ ಲಾರಿ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ನಾಲ್ವರು ಕಾರ್ಮಿಕರ ಪೈಕಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಗಾಯಾಳುಗಳನ್ನು ಉತ್ತರ ಭಾರತ ಮೂಲದವರು ಎಂದು ಮಾಹಿತಿ ಲಭಿಸಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here