ನಗರ ವಲಯ ಟೈಲರ್ ಎಸೋಸಿಯೇಶನ್ ಸಭೆ – ಕರ್ನಾಟಕ ಟೈಲರ್ ಎಸೋಸಿಯೇಶನ್ ನಗರ ವಲಯದ ಸಭೆ, ಧನಸಹಾಯ ಹಸ್ತಾಂತರ

0

ಪುತ್ತೂರು: ಕರ್ನಾಟಕ ಟೈಲರ್ ಎಸೋಸಿಯೇಶನ್ ನಗರ ವಲಯದ ಸಭೆ ಟೈಲರ್ ಎಸೋಸಿಯೇಶನ್ ನಗರ ವಲಯ ಅಧ್ಯಕ್ಷ ದಿನೇಶ್ ಸಂಪ್ಯರವರ ಅಧ್ಯಕ್ಷತೆಯಲ್ಲಿ ದರ್ಬೆ ಶ್ರೀಶಕ್ತಿ ಭವನದ ವಠಾರದಲ್ಲಿ ಅ.1ರಂದು ನಡೆಯಿತು. ನಗರ ವಲಯ ಕಾರ‍್ಯದರ್ಶಿ ಆಶಾ ಕಲ್ಲಾರೆ ಪ್ರಾರ್ಥಿಸಿದರು. ಇತ್ತಿಚೆಗೆ ನಿಧನ ಹೊಂದಿದ ನಗರವಲಯ ಸದಸ್ಯ ಸಂಟ್ಯಾರು ಪಾಪೆತ್ತಡ್ಕ ಅಚ್ಚುತ ಟೈಲರ್‌ರವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕೆ.ಎಸ್.ಟಿ.ಎ ನಗರ ವಲಯ ಸಮಿತಿಯ ಸದಸ್ಯರ ಸದಸ್ಯತನ ನವೀಕರಣ ಹಾಗೂ ಹೊಸ ಸದಸ್ಯರ ಸೇರ್ಪಡೆ ಮಾಡಾಲಾಯಿತು. ರಾಜ್ಯ ಸಮಿತಿ ಲೆಕ್ಕ ಪರಿಶೋಧಕ ರಘನಾಥ್ ಬಿ. ಮಾತಾನಾಡಿ ಟೈಲರ್ ಸಂಘಟನೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ನಗರ ವಲಯ ಅಧ್ಯಕ್ಷ ದಿನೇಶ್ ಸಂಪ್ಯ, ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ಯು. ನಾಕ್, ಉಪಾಧ್ಯಕ್ಷ ಯಶೋಧರ್ ಜೈನ್, ದರ್ಬೆ ನಗರ ವಲಯ ಕೋಶಾಧಿಕಾರಿ ಆರ್.ಬಿ ಜಯದೇವ್, ನಗರ ವಲಯ ಕಾರ‍್ಯದರ್ಶಿ ಆಶಾ ಕಲ್ಲಾರೆ, ಪುತ್ತೂರಿನ ಉದ್ಯಮಿ ನಮ್ರತ, ರಾಜ್ಯ ಸಮಿತಿ ರಘನಾಥ್ ಬಿ. ಪುತ್ತೂರು ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನ ಹೊಂದಿದ ನಗರ ವಲಯ ಸದಸ್ಯ ಸಂಟ್ಯಾರು ಪಾಪೆತ್ತಡ್ಕ ಅಚ್ಚುತ ಟೈಲರ್‌ರವರ ಪತ್ನಿ ಮಮತ ರವರಿಗೆ ಟೈಲರ್ ಎಸೋಸಿಯೇಶನ್ ನಗರ ವಲಯ ಸಮಿತಿಯಿಂದ ಸಂಗ್ರಹ ಮಾಡಿದ ರೂ. 15ಸಾವಿರ ಧನಸಹಾಯವನ್ನು ಅವರ ಪತ್ನಿಗೆ ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here