ಪುತ್ತೂರು: ಗೋಳಿಕಟ್ಟೆಯಲ್ಲಿರುವ ಸೆಲೂನ್‌ವೊಂದರ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದು ಅಂಗಡಿ ಮಾಲಕ ಹಲ್ಲೆ ನಡೆಸಿರುವುದಾಗಿ ಎಂಬ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಳಿಕಟ್ಟೆಯಲ್ಲಿ ಸೆಲೂನ್‌ವೊಂದರಲ್ಲಿ ಸಿಬ್ಬಂದಿಯಾಗಿರುವ ಉತ್ತರಪ್ರದೇಶ ಅಮ್ರೋಹ ಜಲ್ಲೆಯ ಮೂಲದ ಮಹಮ್ಮದ್ ಬಿಲಾಲ್(33ವ)ರವರು ಹಲ್ಲೆಗೊಳಗಾದವರು. ಅವರು ಗೋಳಿಕಟ್ಟೆಯಲ್ಲಿ ಅಬ್ದುಲ್ ರಜಾಕ್ ಎಂಬರ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು. ’ಅ.2ರಂದು ನಾನು ರಾತ್ರಿ ಸೆಲೂನ್ ಬಂದ್ ಮಾಡಿ ರಸ್ತೆ ಬದಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಕಾರಿನಲ್ಲಿ ಬಂದ ಸೆಲೂನ್ ಮಾಲಕ ಅಬ್ದುಲ್ ರಜಾಕ್, ಶಕೀಲ್ ಸವಣೂರು ಮತ್ತು ಇಬ್ಬರು ಅಪರಿಚಿತರು ಕಾರಿನಲ್ಲಿ ಬಿಡುವುದಾಗಿ ಕರೆಸಿ ಬಳಿಕ ದಾರಿಯಲ್ಲಿ ಅಬ್ದುಲ್ ರಜಾಕ್ ಅವರು ಅಂಗಡಿಯಗೆ ಹೆಚ್ಚಿನ ಬಾಡಿಗೆ ಕೊಡುವಂತೆ ತಕಾರರು ಎತ್ತಿದಾಗ ನಾನು ಆಕ್ಷೇಪಿಸಿದಕ್ಕೆ ಕಾರಿನಲ್ಲಿದ್ದ ಇತರರು ನನಗೆ ಹಲ್ಲೆ ನಡೆಸಿ ನನ್ನ ಪರ್ಸ್ ಮತ್ತು ಅದರಲ್ಲಿದ್ದ ರೂ. 7500 ನಗದು, ದಾಖಲಾತಿಗಳನು ಕಸಿದು ಜೀವ ಬೆದರಿಕೆಯೊಡ್ಡಿ ವಿಟ್ಲ ಮಂಗಿಲಪದವು ಎಂಬಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಮಹಮ್ಮದ್ ಬಿಲಾಲ್ ಅವರು ಆರೋಪಿಸಿದ್ದಾರೆ. ಮಹಮ್ಮದ್ ಬಿಲಾಲ್ ಅವರು ನೀಡಿದ ದೂರಿನಂತೆ ಅರೊಪಿಗಳ ವಿರುದ್ಧ ಅಪರಹಣ, ದರೋಡೆ, ಹಲ್ಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.