ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿ ಇಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಶಿಕ್ಷಕರಿಗೆ ಯೋಗ ತರಬೇತಿ ಕಾರ್ಯಗಾರವು ಅ. 2 ರಂದು ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇಲ್ಲಿನ ಮೊಕ್ತೇಸರರಾದ ವಿನೋದ್ ಕುಮಾರ್ ರೈ ಗುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗವು ಜೀವನದ ಒಂದು ಭಾಗ. ನಿರಂತರ ಯೋಗಭ್ಯಾಸದಲ್ಲಿ ತೊಡಗಿದ್ದಲ್ಲಿ ಹಲವು ಕಾಯಿಲೆಗಳಿಂದ ನಾವು ದೂರವಿರುವುದು ಅಕ್ಷರಶಃ ಸತ್ಯ ಎಂದು ಮಾತನಾಡುತ್ತಾ, ತಮ್ಮ ಜೀವನದಲ್ಲಿ ಯೋಗದ ಅನುಭವಗಳನ್ನು ಹಂಚಿಕೊಂಡರು. ನಂತರದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಪರಿವೀಕ್ಷಕರಾದ ಸಂಜಯ ರವರು ಯೋಗದ ಅನೇಕ ವಿಚಾರಗಳು ಅಷ್ಟಾಂಗಯೋಗ ಆಸನ ಪ್ರಾಣಾಯಾಮದ ಪ್ರಾಮುಖ್ಯತೆ ಹಾಗೂ ಮಹತ್ವವನ್ನು 3 ಗಂಟೆಗಳ ಕಾರ್ಯಗಾರದಲ್ಲಿ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ಕುಮಾರ್ ರಾವ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ರೀಮತಿ ರಕ್ಷಿತಾ ಪ್ರಾರ್ಥಿಸಿದರು. ಮುಖ್ಯಗುರು ರಾಜೇಶ್ ಎನ್. ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಭವ್ಯ ವಂದಿಸಿದರು. ತದನಂತರದಲ್ಲಿ ಎಲ್ಲಾ ಶಿಕ್ಷಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.