ವಲಯ ಮಟ್ಟದ ಕ್ರೀಡಾಕೂಟ- ಬೆಥನಿ ಶಾಲೆಯ ಮೂವರು ತಾಲೂಕು ಮಟ್ಟಕ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟ ಸಮಿತಿ, ಹಾಗೂ ದ. ಕ ಜಿ ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಡಿಪಾಡಿ ಇದರ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವೈಯುಕ್ತಿಕ ಬಹುಮಾನ ಗಳಿಸಿದ್ದಾರೆ.


ಸಂಸ್ಥೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಶಾಜದ್ ಉದ್ದಜಿಗಿತ ಮತ್ತು ಏತ್ತರ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದಿರುತ್ತಾರೆ. ಹಾಗೆಯೇ ಶಾನ್ ಮಾಡ್ತಾ ಇವರು ಗುಂಡು ಎಸೆತದಲ್ಲಿ ತೃತೀಯ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಹಾಗೆಯೇ ಬಾಲಕಿಯ ವಿಭಾಗದಲ್ಲಿ ಆಯಿಷಾ ಹಿಬಾ ಇವರು ಗುಂಡು ಎಸೆತ ದಲ್ಲಿ ದ್ವಿತೀಯ ಮತ್ತು ಚಕ್ರ ಎಸೆತ ದಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದಿದ್ದು, ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ

LEAVE A REPLY

Please enter your comment!
Please enter your name here