ಆಧಾರ್ ನೋಂದಣಿ, ತಿದ್ದುಪಡಿ ಶಿಬಿರ-ಗ್ರಾಮಸ್ಥರಿಂದ ಉತ್ತಮ ಸ್ಪಂದನೆ-ಇನ್ನೆರಡು ದಿನ ವಿಸ್ತರಣೆ
ಪುತ್ತೂರು:ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಹಕಾರಿ ಕ್ಷೇತ್ರದ ಸೇವೆಗಳ ಜೊತೆಗೆ ತನ್ನ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ‘ಜನ ಸಂಪರ್ಕ ಅಭಿಯಾನ’ಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರೆತಿದೆ. ಜನರ ಅಪೇಕ್ಷೇಯಂತೆ ಶಿಬಿರವನ್ನು ಅ.6 ಮತ್ತು 7ರಂದು ಎರಡು ದಿನಗಳ ಕಾಲ ಮುಂದುವರಿಸಲಾಗಿದೆ.
ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹ ಭಾಗಿತ್ವದಲ್ಲಿ ನಡೆದ ಆಧಾರ್ ನೊಂದಣಿ ಹಾಗೂ ತಿದ್ದುಪಡಿ ಶಿಬಿರ ಜನ ಸಂಪರ್ಕ ಅಭಿಯಾನದಲ್ಲಿ ಶಿಬಿರದಲ್ಲಿ 18 ವರ್ಷದೊಳಗಿನವರಿಗೆ ಹೊಸ ಆಧಾರ್ ನೊಂದಾವಣೆ, 5ರಿಂದ 15 ವರ್ಷದ ಒಳಗಿನವರಿಗೆ ಬಯೋಮೆಟ್ರಿಕ್ ಅಪ್ಡೇಟ್, ಇತರ ಅಪ್ಡೇಟ್ ಹಾಗೂ ತಿದ್ದುಪಡಿಗಳು, ಹೆಸರು ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ವಿಳಾಸ ಬದಲಾವಣೆ, 10 ವರ್ಷದ ಮೀರಿದ ಆಧಾರ್ ಅಪ್ಡೇಟ್ ಹಾಗೂ ಮೊಬೈಲ್ ಲಿಂಕ್ ಸೇರಿದಂತೆ ಹಲವು ತಿದ್ದುಪಡಿಗಳಿಗೆ ಅವಕಾಶ ನೀಡಲಾಗಿತ್ತು. ಅಭಿಯಾನಕ್ಕೆ ಪ್ರಥಮ ದಿನವೇ ಉತ್ತಮ ಸ್ಪಂಧನೆ ದೊರೆತಿದ್ದು ಉಜ್ರುಪಾದೆ ಶಾಖಾ ಕಚೇರಿ ಪರಿಸರದ ಸುಮಾರು 115ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಎರಡನೇ ದಿನ ಬೆಳಿಯೂರುಕಟ್ಟೆಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಶಿಬಿರದಲ್ಲಿ ಸುಮಾರು 90 ಮಂದಿ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಎರಡು ದಿನಗಳ ಕಾಲ ಆಯೋಜಿಸಿದ ಜನ ಸಂಪರ್ಕ ಅಭಿಯಾನದಲ್ಲಿ ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಅ.4ರಂದು ಸಂಘದ ಶಾಖಾ ಕಚೇರಿ ಉಜ್ರುಪಾದೆ ಹಾಗೂ ಅ.5ರಂದು ಸಂಘದ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಅಂಚೆ ಇಲಾಖೆಯ ಉತ್ತರ ಉಪ ವಿಭಾಗದ ಸಿಬಂದಿಗಳಾದ ಚೇತನಾ ಹಾಗೂ ವರಶ್ರೀ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಸಂಘದ ಅಧ್ಯಕ್ಷ ಸತೀಶ್ ಗೌಡ ವಳಗುಡ್ಡೆ, ಉಪಾಧ್ಯಕ್ಷ ಅಬ್ದುಲ್ ಹಕಿಂ, ನಿರ್ದೇಶಕರಾದ ಪ್ರವೀಣ್‌ಚಂದ್ರ ಆಳ್ವ ಎ.ಎಂ, ನವೀನ್ ಕರ್ಕೇರಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ, ಸಿಬಂದಿಗಳಾದ ವೆಂಕಟಕೃಷ್ಣ ಪಿ, ಕೆ.ಶುಭ, ಕೀರ್ತನ್ ಶೆಟ್ಟಿ, ಪುಷ್ಪಾ ಎಂ ಉಪಸ್ಥಿತರಿದ್ದರು.
ಎರಡು ದಿನ ವಿಸ್ತರಣೆ:
ಆಧಾರ್ ನೊಂದಣಿ ಮತ್ತು ತಿದ್ದುಪಡಿ ಶಿಬಿರ ಜನ ಸಂಪರ್ಕ ಅಭಿಯಾನಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂಧನೆ ದೊರೆತಿದೆ. ಜನರ ಅಪೇಕ್ಷೆಯಂತೆ ಇನ್ನೂ ಎರಡು ದಿನಗಳ ಕಾಲ ಶಿಬಿರವನ್ನು ಮುಂದುವರಿಸಲಾಗಿದ್ದು ಅ.6ರಂದು ಬೆಳಿಯೂರುಕಟ್ಟೆಯಲ್ಲಿರುವ ಸಂಘದ ಪ್ರಧಾನ ಕಚೇರಿ ಹಾಗೂ ಅ.7ರಂದು ಸಂಘದ ಶಾಖೆ ಉಜ್ರುಪಾದೆಯಲ್ಲಿ ಶಿಬಿರವು ನಡೆಯಲಿದೆ. ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.