ಪುಣಚ ಗ್ರಾಪಂ ಜಮಾಬಂದಿ ಸಭೆ

0

ಪುತ್ತೂರು: ಪುಣಚ ಗ್ರಾಮ ಪಂಚಾಯತ್‌ನ 2022-23ನೇ ಸಾಲಿನ ಜಮಾ ಬಂದಿ ಸಭೆಯು ಅ.5ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಗ್ರಾಪಂ ಅಧ್ಯಕ್ಷೆ ಯಶೋಧಾ ಯಾನೆ ಬೇಬಿಯವರ ಅಧ್ಯಕ್ಷತೆಯಲ್ಲಿ ನಡೆದ ಜಮಾಬಂದಿ ಸಭೆಗೆನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ ಬಂಟ್ವಾಳ ತಾಲೂಕು ಪಂಚಾಯತ್‌ನ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವಿಶ್ವನಾಥ ಬಿ ಮಾತನಾಡಿ, ಪಂಚಾಯತ್ ಆಡಳಿತ ವ್ಯವಸ್ಥೆ ಗ್ರಾಮಸ್ಥರಿಗೆ ಮಾಹಿತಿ ನೀಡಿ, ಜಮಾಬಂದಿ ಸಭೆಗೆ ಹಾಜರಾಗಲು ಉತ್ತೇಜಿಸಬೇಕು. ಪಂಚಾಯತ್ ಸಾಮಾನ್ಯ ಸಭೆಗೆ ಸರ್ವ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು. ಸ್ಥಾಯಿ ಸಮಿತಿ ಸಭೆಗಳನ್ನು ನಿಗದಿತವಾಗಿ ನಡೆಸಬೇಕು. ಉಪ ಸಮಿತಿಗಳು ನಿಯಮಿತವಾಗಿ ಮತ್ತು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರಕ್ಕೆ ಸಂದಾಯವಾಗುವ ತೆರಿಗೆ ವಸೂಲಾತಿ ಕ್ಲಪ್ತವಾಗಿ ನಡೆಸಲು ಸದಸ್ಯರು, ಸಿಬ್ಬಂದಿಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ತಾಲೂಕು ಪಂಚಾಯತ್ ಲೆಕ್ಕ ಸಹಾಯಕಿ ಟ್ರೆಸ್ಸಿ ರೊಡ್ರಿಗಸ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಪಿಡಿಒ ರವಿ ಸ್ವಾಗತಿಸಿದರು. ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಪಾರ್ವತಿ ವರದಿ ಮಂಡಿಸಿದರು. ಸಿಬ್ಬಂದಿ ಸತ್ಯಪ್ರಕಾಶ್ ವಂದಿಸಿದರು. ಸಿಬ್ಬಂದಿ ಮಮತಾ ಕಜೆಮಾರ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯರು, ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಜಮಾಬಂದಿ ಬಳಿಕ ವರದಿಯಲ್ಲಿ ನಮೂದಿಸಲಾದ ಎರಡು ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು.

LEAVE A REPLY

Please enter your comment!
Please enter your name here