ಕಡಬ ವಲಯ ಮಟ್ಟದ ಕ್ರೀಡಾಕೂಟ :ರಾಮಕುಂಜ ಕ.ಮಾ.ಪ್ರೌಢಶಾಲೆಯ ಬಾಲಕರ ತಂಡಕ್ಕೆ ಸಮಗ್ರ ರನ್ನರ್ ಅಫ್ ಪ್ರಶಸ್ತಿ

0


ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇದರ ಆಶಯದಲ್ಲಿ ನಡೆದ ಕಡಬ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ 17ರ ವಯೋಮಾನದ ಬಾಲಕರ ಸಮಗ್ರ ರನ್ನರ್ ಅಫ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.


10ನೇ ತರಗತಿಯ ಕಾರ್ತಿಕ್ 100 ಮೀ. ಓಟ ಪ್ರಥಮ ಹಾಗೂ ೨೦೦ಮೀ. ಓಟ ತೃತೀಯ, 10ನೇ ತರಗತಿಯ ಮಹಮ್ಮದ್ ಅಝೀಮ್ ತ್ರಿವಿಧ ಜಿಗಿತ ಪ್ರಥಮ, 10ನೇ ತರಗತಿಯ ಹಿತೇಶ್ ಎನ್.ಕೆ. 400ಮೀ. ದ್ವಿತೀಯ, ೯ನೇ ತರಗತಿಯ ಕೃಪಾ ಕೆ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತ ತೃತೀಯ, ಚೈತಿಕ ಎನ್.ಎಸ್ ಗುಂಡು ಎಸೆತ ದ್ವಿತೀಯ ಮತ್ತು 17ರ ವಯೋಮಾನದ ಹುಡುಗರ ರೀಲೇ ತೃತೀಯ ಸ್ಥಾನ ಪಡೆದುಕೊಂಡಿದೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈಯವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಶಾಲಾ ಮುಖ್ಯಗುರು ಸತೀಶ್ ಭಟ್ ಹೂಗೂ ಶಾಲಾ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯವರು ಸಹಕರಿಸಿದ್ದರ

LEAVE A REPLY

Please enter your comment!
Please enter your name here