ಪ್ರಥಮ ಪ್ರದರ್ಶನದಲ್ಲಿ ಜನ ಮೆಚ್ಚುಗೆ ಗಳಿಸಿದ ‘ಮುರಳಿ ಈ ಪಿರ ಬರೊಲಿ’ ನಾಟಕ

0

ಪುತ್ತೂರು: ಗಯಾಪದ ಕಲಾವಿದೆರ್ ಉಬಾರ್ ತಂಡದ ಈ ವರ್ಷದ ಕಲಾ ಕಾಣಿಕೆ “ಮುರಳಿ ಈ ಪಿರ ಬರೊಲಿ” ನಾಟಕವು ಪ್ರಥಮ ಪ್ರದರ್ಶನದಲ್ಲಿ ಜನ ಮನ್ನಣಿಯನ್ನು ಗಳಿಸಿದೆ. ಸುಳ್ಯ ತಾಲೂಕು ಪಂಜ ಬಳ್ಯಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಅತಿಥಿಗಳ ಉಪಸ್ಥಿತಿಯಲ್ಲಿ ರಂಗಾರ್ಪಣೆಗೊಂಡು ಪ್ರಥಮ ಪ್ರದರ್ಶನಗೊಂಡಿತು. ಉತ್ತಮ ಕಥಾ ಹಂದರವನ್ನು ಹೊಂದಿದ್ದು, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಈ ನಾಟಕವು ಜನಮೆಚ್ಚುಗೆ ಗಳಿಸಿದೆ.
2ನೇಯ ಪ್ರದರ್ಶನವು ಪುರುಷರಕಟ್ಟೆಯ ಶ್ರೀ ಗಣೇಶೋತ್ಸವ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಬುದ್ಧ ರಂಗಕಲಾವಿದರ ಅಭಿನಯ ನೆರೆದಿದ್ದ ಜನರನ್ನು ಸಂತೋಷಗೊಳಿಸಿ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಇರುವ ಒಂದು ನಾಟಕವಾಗಿ ಮೂಡಿ ಬಂತು.
ಪ್ರಬುದ್ಧ ರಂಗ ಕಲಾವಿದರುಗಳಾಗಿ, ಕಲಾ ಕೌಸ್ತುಭ ಗಂಗಾಧರ ಟೈಲರ್, ಕಿಶೋರ್ ಜೋಗಿ ಉಬಾರ್, ರಾಜೇಶ್ ಶಾಂತಿನಗರ, ವೈಶಾಲಿ ಎಂ. ಕುಂದರ್, ಅನುಷಾ ಜೋಗಿ ಪುರುಷರಕಟ್ಟೆ, ಕಲಾ ಚತುರ ಅಶೋಕ್ ಬನ್ನೂರು, ಹಾಸ್ಯ ಸಿಂಧೂರ ರಾಜಶೇಖರ ಶಾಂತಿನಗರ, ಅನಿಲ್ ಇರ್ದೆ, ದಿವಾಕರ ಸುರ್ಯ, ಸತೀಶ್ ಹಿರೇಬಂಡಾಡಿ, ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್ ಆರ್ ಪುತ್ತೂರು ಹಾಗೂ ಚೇತನ್ ಪಡೀಲ್ ಇವರ ಅಭಿನಯಿಸಿದ್ದಾರೆ.
ರಾಜೇಶ್ ಶಾಂತಿನಗರ ಇವರ ಸಲಹೆ, ಸಹಕಾರ, ಮಾರ್ಗದರ್ಶನ, ಕಿಶೋರ್ ಜೋಗಿ ಉಬಾರ್ ಇವರ ಸಂಚಾಲಕತ್ವ ಹಾಗೂ ತಂಡದ ಯಜಮಾನರಾದ ಬಾಲಕೃಷ್ಣ ಪೂಜಾರಿ ಪೆರುವಾಯಿ ನಿರಾಲ ಇವರ ಸಾರಥ್ಯದಲ್ಲಿ ತಂಡವು 5ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು, ವರ್ಷದಿಂದ ವರ್ಷಕ್ಕೆ ರಂಗಭೂಮಿಗೆ ತನ್ನದೇ ಆದ ಕಲಾಕಾಣಿಕೆ ನೀಡುತ್ತಿದೆ.

LEAVE A REPLY

Please enter your comment!
Please enter your name here