ಪುತ್ತೂರು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ, ಉಪನಿರ್ದೇಶಕರ ಕಚೇರಿ ಮಂಗಳೂರು ಹಾಗೂ ಲೇಡಿ ಹಿಲ್ ವಿಕ್ಟೋರಿಯಾ ಪ್ರೌಢಶಾಲೆ ಮಂಗಳೂರು ಇವರ ಆಶ್ರಯದಲ್ಲಿ ಮಂಗಳೂರಿನ ಮಂಗಳ ಈಜುಕೊಳದಲ್ಲಿ ನಡೆದ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಅನ್ವಿತ್ ರೈ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅನ್ವಿತ್ ರೈ 50 ಮೀಟರ್ ಹಾಗೂ 100 ಮೀಟರ್ ಬಟರ್ಫ್ಲೈ (butterfly ) ಬೆಳ್ಳಿಯ ಪದಕ, 4×100 ರಿಲೆಯಲ್ಲಿ ಕಂಚಿನ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪರ್ಪುಂಜ ನಿವಾಸಿ ಬಿ ಏನ್ ಅನಿಲ್ ಕುಮಾರ್ ಹಾಗೂ ದಿವ್ಯ ಎ ರೈ ಇವರ ಸುಪುತ್ರ.
ಅಮೈ ಭಟ್ 200 ಮೀಟರ್ ಫ್ರೀ ಸ್ಟೈಲ್ ಹಾಗೂ 50 ಮೀಟರ್ ಬ್ಯಾಕ್ ಸ್ಟ್ರೋಕ್ನಲ್ಲಿ ಕಂಚಿನ ಪದಕ, ರಿಲೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಆಲ್ವಿನ್ ನೋರನ್ನ ಹಾಗೂ ಜೆಡನ್ ಕುಟಿನಾ ರಿಲೇ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿರುತ್ತಾರೆ. ಇವರು ಬಾಲವನ ಈಜುಕೊಳದ ತರಬೇತುದಾರರಿಂದ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.