ಕಬಡ್ಡಿ : ಸಂತ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿ ದೀಕ್ಷಾ ಎಸ್ ಹಾಗೂ ವಿಜೇತ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಲಿಟಲ್ ಫ್ಲವರ್ ಶಾಲೆ ಪುತ್ತೂರು ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ 14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳಾದ ದೀಕ್ಷಾ ಎಸ್ ಹಾಗೂ ವಿಜೇತ ಇವರು ಮಂಡ್ಯದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಕಬ್ಬಡಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ದೀಕ್ಷಾ ಎಸ್ ಪುತ್ತೂರು ನಿವಾಸಿ ಶಿವಪ್ರಸಾದ್ ಎ ಹಾಗೂ ಅನುಪಮಾ ಇವರ ಸುಪುತ್ರೀ. ವಿಜೇತ ನಕ್ಕರೆ ನಿವಾಸಿ ಕೆ ಜಯರಾಮ ಕುಲಾಲ್ ಹಾಗೂ ಚೈತ್ರ ಇವರ ಸುಪುತ್ರಿ.

LEAVE A REPLY

Please enter your comment!
Please enter your name here