ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಗಳಿಗೆ ಚಾಲನೆ

0

ಪ್ರತಿದಿನ ಭಜನೆ, ಸಪ್ತಶತಿ ಪಾರಾಯಣ, ಸಂಜೆ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ,

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ನವರಾತ್ರಿ ಉತ್ಸವಗಳಿಗೆ ಅ.15 ರಂದು ಚಾಲನೆ ನೀಡಲಾಯಿತು.


ಬೆಳಿಗ್ಗೆ ನಿತ್ಯಪೂಜೆಯ ಬಳಿಕ ನವರಾತ್ರಿ ಉತ್ಸವದ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ತಯಾರಿಸಲಾಗಿರುವ ಚಿನ್ನದ ಸರವನ್ನು ವಿಶೇಷವಾಗಿ ದೇವಿಗೆ ಸಮರ್ಪಣೆಗೊಂಡಿತು. ನವರಾತ್ರಿಯಲ್ಲಿ ಪ್ರತಿದಿನ ನಡೆಯಲಿರುವ ಭಜನಾ ಕಾರ್ಯಕ್ರಮಗಳಿಗೆ ಕ್ಷೇತ್ರದ ಹಿರಿಯ ಅರ್ಚಕ ಕೇಶವ ಭಟ್ ದೀಪ ಬೆಳಗಿಸಿ ಉದ್ಘಾಸಿದರು. ಬಳಿಕ ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ ಹಾಗೂ ಶ್ರೀದುರ್ಗಾ ಭಜನಾ ಮಂಡಳಿಯ ಕುಂಜೂರುಪಂಜ ಇವರಿಂದ ಭಜನಾ ಸೇವೆ ನಡೆಯಿತು. ನಂತರ ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನೆರವೇರಿತು.


ಸಂಜೆ ನವದಿನ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಕ್ಷೇತ್ರ ಕುಂಜೂರಿನ ಹಿರಿಯ ಅರ್ಚಕ ಹೆಚ್.ಕೇಶವ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಪೆರ್ಲ ಶಿವಾಂಜಲಿ ಕಲಾಕೇಂದ್ರದ ಸಾಜ ಮತ್ತು ಪರಿಯಾಲ್ತಡ್ಕ ಶಾಖೆಯ ವಿದ್ಯಾರ್ಥಿಗಳಿಂದ ‘ನೃತ್ಯ ಪಲ್ಲವ’ ಭರತನಾಟ್ಯ ಹಾಗೂ ಜಾನಪದ ನೃತ್ಯಗಳು ನಡೆಯಿತು. ಸಂಜೆ ನೃತ್ಯಪೂಜೆ, ದುರ್ಗಾಪೂಜೆ, ರಂಗಪೂಜೆ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.


ನವರಾತ್ರಿ ಉತ್ಸವದಲ್ಲಿ ಪ್ರತಿದಿನ….!
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ನಿತ್ಯಪೂಜೆ, ದುರ್ಗಾಪೂಜೆ, ಸಾಮೂಹಿಕ ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ನಡೆಯುವ ವಿಶೇಷ ರಂಗಪೂಜೆಯಲ್ಲಿ ಭಕ್ತಾದಿಗಳಿಗೆ ಸೇವೆ ಸಲ್ಲಿಸಬಹುದು. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿದೆ.


ಅ.22 ಧಾರ್ಮಿಕ ಸಭೆ, ಸನ್ಮಾನ:
ನವರಾತ್ರಿ ಉತ್ಸವದಲ್ಲಿ ಅ.22ರಂದು ಸಂಜೆ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮಗಳು, ಅ.23ರಂದು ಬೆಳಿಗ್ಗೆ ವಿಶೇಷವಾಗಿ ಚಂಡಿಕಾ ಯಾಗ, ಸಂಜೆ ಆಯುಧ ಪೂಜೆ ನಡೆಯಲಿದೆ. ಅ.೨೪ರ ವಿದ್ಯಾದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ನವರಾತ್ರಿ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here