ಬೆಳ್ತಂಗಡಿ ಧರ್ಮ ಪ್ರಾಂತ್ಯ ಉದನೆ ವಲಯ ಮಕ್ಕಳ ಪ್ರತಿಭೋತ್ಸವ – ನೆಲ್ಯಾಡಿ ಅಲ್ಫೋನ್ಸಾ ಸಂಡೆ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ

0

  • ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಾರ್ಷಿಕ ಮಕ್ಕಳ ಪ್ರತಿಭಾ ಸಂಗಮದ ಅಂಗವಾಗಿ ಅ.15 ರಂದು ಅಡ್ಡಹೊಳೆಯಲ್ಲಿ ನಡೆದ ಮಕ್ಕಳ ಪ್ರತಿಭಾ ಸ್ಪರ್ಧೆಗಳಲ್ಲಿ ನೆಲ್ಯಾಡಿ ಅಲ್ಫೋನ್ಸಾ ಸಂಡೆ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
  • ಬೈಬಲ್ ರಸ ಪ್ರಶ್ನೆಯಲ್ಲಿ ಪ್ರಥಮ ಸ್ಥಾನವನ್ನು ನೆಲ್ಯಾಡಿಯ ಅಲ್ವಿನ್, ಡೆಲ್ವಿನ್ ಅಲೆಕ್ಸ್ ಅವರ ತಂಡ, ಆಕ್ಷನ್ ಸಾಂಗ್ ವಿಭಾಗ ದಲ್ಲಿ ಆಶ್ಲೀನ್, ಸಾನ್ ಮೇರಿ, ಜ್ಯುವೆಲ್ ಮರಿಯಾ, ಜಿಯಾ, ಅಲ್ಫೋನ್ಸ, ಮಿಯಾ ರೋಸ್, ಅಲೋನ ಜೇಮ್ಸ್, ಎಲಿಸಬೇತ್ ತಂಡಕ್ಕೆ ದ್ವಿತೀಯ ಸ್ಥಾನ, ನ್ರತ್ಯದಲ್ಲಿ ಜಿಯಾ ಪ್ರಥಮ , ಛದ್ಮವೇಷದಲ್ಲಿ ಮಿಯಾ ರೋಸ್ ದ್ವಿತೀಯ , ಅಲ್ವಿನ್ ಅಬ್ರಹಾಂ ತೃತೀಯ ಸ್ಥಾನ ಪಡೆದುಕೊಂಡರು. ವಂ. ಸಿಸ್ಟೆರ್ ಬ್ಲೆಸಿ ಮರಿಯಾ, ಬಿಂದು ಟೈಟಸ್, ಶ್ರೀಮತಿ ಟೆಸಿ, ಕ್ರಿಸ್ಟೀನಾ, ಪ್ರಿನ್ಸಿ ಹಾಗೂ ಮುಖ್ಯೋಪಾಧ್ಯಾಯರಾದ ರೊಯ್ ಹಾಗೂ ಇತರ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ಅಭಿನಂದಿಸಿದರು.

LEAVE A REPLY

Please enter your comment!
Please enter your name here