ಕಬಕ ಸುಲ್ತಾನ್ ನಗರದಲ್ಲಿ ಮೀಲಾದ್ ಫೆಸ್ಟ್

0

ಆಸಿಫ್ ಝುಹ್ರಿ ಉಸ್ತಾದರಿಗೆ ರೂ.1 ಲಕ್ಷದ ಚೆಕ್ ಹಸ್ತಾಂತರ

ಪುತ್ತೂರು: ಮೀಲಾದ್ ಸಮಿತಿ ಸುಲ್ತಾನ್ ನಗರ ಕಬಕ ಇದರ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಈದ್ ಮೀಲಾದ್ ಕಾರ್ಯಕ್ರಮ ಅ.14ರಂದು ಸುಲ್ತಾನ್ ನಗರ ಮದ್ರಸ ವಠಾರದಲ್ಲಿ ನಡೆಯಿತು.


ಬೆಳಿಗ್ಗೆ ಹಾಜಿ ಇಸ್ಮಾಯಿಲ್ ಸಾಹೇಬ್ ಸುಲ್ತಾನ್‌ನಗರ ಹಾಗೂ ಊರಿನ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸೀಫ್ ಝುಹ್ರಿ ವಹಿಸಿದ್ದರು. ಗಫೂರ್ ಉಸ್ತಾದ್ ದುವಾ ನೆರೆವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಿರಾಹತ್ ಮೂಲಕ ಸುಲ್ತಾನ್ ನಗರ ಮದ್ರಸ ವಿದ್ಯಾರ್ಥಿ ಅಸ್ಫಾಕ್ ನೆರೆವೇರಿಸಿದರು. ಅಬ್ದುಲ್ ರಹಮಾನ್ ಸಖಾಫಿ ಕಲ್ಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಳೆದ 14 ವರ್ಷಗಳಿಂದ ಸುಲ್ತಾನ್ ನಗರದಲ್ಲಿ ಕಾರ್ಯಾ ನಿರ್ವಹಿಸುವ ಮೂಲಕ ಮಾರ್ಗದರ್ಶನ ನೀಡುತ್ತಾ ಊರವರ ಮೆಚ್ಚುಗೆಗೆ ಪಾತ್ರವಾಗಿರುವ ಆಸಿಫ್ ಝುಹ್ರಿ ಅವರಿಗೆ ಸುಲ್ತಾನ್ ಯಂಗ್‌ಮೆನ್ಸ್ ಹಾಗೂ ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಸುಲ್ತಾನ್ ನಗರ ಇವರಿಂದ ಮೀಲಾದ್ ಉಡುಗೊರೆಯಾಗಿ ರೂ. 1 ಲಕ್ಷದ ಚೆಕ್ ವಿತರಣೆ ಮಾಡಲಾಯಿತು. ಉಸ್ತಾದರಿಗೆ 1 ಲಕ್ಷ ರೂ ನೀಡಿದ ಸುಲ್ತಾನ್ ನಗರದ ಯುವಕರ ಕಾರ್ಯ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಯಿತು. ಸಿದ್ದೀಕ್ ಎಚ್‌ಕೆಬಿಕೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here