ಪುತ್ತೂರು: ಬಾಂದಲಪ್ಪು ಜನಸೇವಾ ಸಮಿತಿ ಕುಂಬ್ರ ಇದರ ಆಶ್ರಯದಲ್ಲಿ ಕುಂಬ್ರದ ಮಾರ್ನೆಮಿದ ಗೌಜಿ ಆಯ್ದ ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ ಅ.23ರಂದು ಸಂಜೆ ಕುಂಬ್ರ ಜಂಕ್ಷನ್‌ನಲ್ಲಿರುವ ಕುಂಬ್ರ ಚೆನ್ನಪ್ಪ ರೈ-ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಮಾರ್ನೆಮಿ ವೇಷಧಾರಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ಸಿಝ್ಲರ್ ಪುತ್ತೂರು ಇದರ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ ಉದ್ಘಾಟಿಸಲಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದಿವ್ಯಪ್ರಭಾ ಚಿಲ್ತಡ್ಕ, ಡಾ.ಹರ್ಷ ಕುಮಾರ್ ರೈ ಮಾಡಾವು, ರತನ್ ರೈ ಕುಂಬ್ರ, ಶ್ರೀರಾಮ ಪಕ್ಕಳ, ಪದ್ಮನಾಭ ರೈ ಅರೆಪ್ಪಾಡಿ, ಮೋಹನದಾಸ ರೈ ಕುಂಬ್ರ, ಶ್ರೀನಿವಾಸ ರೈ ಕುಂಬ್ರ, ಜಯರಾಮ ಪೂಜಾರಿ ಕುಕ್ಕುತ್ತಡಿ, ಭವಾನಿ ಬಿ.ಆರ್, ಅವಿನಾಶ್ ರೈ ಕುಡ್ಚಿಲ, ಸಿಶೇ ಕಜೆಮಾರ್ ಭಾಗವಹಿಸಲಿದ್ದಾರೆ.
ಬಹುಮಾನಗಳು
ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯಲ್ಲಿ ರನ್ನರ್ ತಂಡಕ್ಕೆ 2 ಮುಡಿ ಅಕ್ಕಿ, ರನ್ನರ್-1ಗೆ 1 ಮುಡಿ ಅಕ್ಕಿ, ರನ್ನರ್2ಗೆ 1 ಮುಡಿ ಅಕ್ಕಿ ಹಾಗೂ ಶಾಶ್ವತ ಫಲಕ ಅಲ್ಲದೆ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಗೌರವ ಧನದೊಂದಿಗೆ ಸ್ಮರಣಿಕೆ ನೀಡಲಾಗುವುದು. ಸ್ಪರ್ಧೆಯ ವಿಶೇಷತೆಯಾಗಿ ಕಂಬಳದಂತೆ ಜುಗಲ್ ಬಂದಿ ನಿರೂಪಣೆ ಇರಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗವಹಿಸುವಂತೆ ಬಾಂದಲಪ್ಪು ಜನಸೇವಾ ಸಮಿತಿಯ ಗೌರವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಅಧ್ಯಕ್ಷ ರಕ್ಷಿತ್ ರೈ ಮುಗೇರು, ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ ಹಾಗೂ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9741482875 ಗೆ ಸಂಪರ್ಕಿಸಬಹುದಾಗಿದೆ.