ಶಾರದಾ ಭಜನಾ ಮಂದಿರ ಪುತ್ತೂರು, 89ನೇ ವರ್ಷದ ನವರಾತ್ರಿ – ಶಾರದೋತ್ಸವ ಅಂಗವಾಗಿ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂದಿರದ ಪ್ರಧಾನ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯರು ದೀಪ ಪ್ರಜ್ವಲನ ಮೂಲಕ ಉದ್ಘಾಟಿಸಿದರು. ಸಾಧನಾ ಸಂಗೀತ ಪ್ರತಿಷ್ಠಾನದ ವತಿಯಿಂದ ಡಾ. ವಿದುಷಿ ಸುಚಿತ್ರಾ ಹೊಳ್ಳರವರ ಶಿಷ್ಯೆ ಸುಮನಾ ರಾವ್, ಮೃದಂಗ ಕಲಾವಿದ ಶ್ಯಾಮ್ ಭಟ್ ಸುಳ್ಯ, ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಶಿಷ್ಯೆಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ನಂತರ ಪ್ರಕಾಶ್ ಆಚಾರ್ಯ ಕುಂಟಾರು, ಲಿಂಗಪ್ಪ ಗೌಡ ಕಡೆಂಗ ಮತ್ತು ಬಳಗದವರಿಂದ ಭಕ್ತಿಭಾವ ಸಂಗಮ ನಡೆಯಿತು.