ಪುತ್ತೂರು: ಖ್ಯಾತ ಮೂತ್ರಶಾಸ್ತ್ರಜ್ಞ ಡಾ.ಅಭೀಷ್ ಹೆಗ್ಡೆ ಮತ್ತು ಬ್ರೆಸ್ಟ್, ಥೈರಾಯ್ಡ್ & ಎಂಡೋಕ್ರೈನ್ ಸರ್ಜನ್ ಡಾ. ಸ್ಮಿತಾ ರಾವ್ ರವರ ‘ಯು ಬ್ರೀದ್’ ಕ್ಲಿನಿಕ್ ಮಂಗಳೂರಿನ ಬಲ್ಮಠದಲ್ಲಿರುವ ಮೈಲ್ ಸ್ಟೋನ್ ಕಟ್ಟಡದ ಎರಡನೇ ಮಹಡಿಯಲ್ಲಿ ಅ.18ರಂದು ಸಾಯಂಕಾಲ ಶುಭಾರಂಭಗೊಳ್ಳಲಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಿಯಾ ಬಲ್ಲಾಳ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಂಗಳೂರಿನ ಎ.ಜೆ. ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಎಂಡೊಕ್ರೈನೋಲಜಿ ವಿಭಾಗದ ಹೆಚ್.ಒ.ಡಿ. ಡಾ. ಗಣೇಶ್ ಎಚ್.ಕೆ. ಹಾಗೂ
ರೋಟರಿ ಜಿಲ್ಲಾ ಡಿಜಿಇ ವಿಕ್ರಮ್ ದತ್ತ ರವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕ್ಲಿನಿಕ್ ನಲ್ಲಿ ಸಮಾಲೋಚನೆಗೆ ಲಭ್ಯವಿರಲಿರುವ ಮೂತ್ರಶಾಸ್ತ್ರಜ್ಞ ಡಾ. ಅಭೀಷ್ ಹೆಗ್ಡೆ ಹಾಗೂ ಸ್ತನ ಮತ್ತು ಎಂಡೊಕ್ರೈನೋಲಜಿ ವೈದ್ಯೆ ಡಾ.ಸ್ಮಿತಾ ರಾವ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.