ನರಿಮೊಗರು: ದೀಷ್ಣ ಫ್ಯಾನ್ಸಿ, ಬ್ಯೂಟಿಪಾರ್ಲರ್ ಶುಭಾರಂಭ

0

ಪುತ್ತೂರು: ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘದ ಶಾಂತಿಗೋಡು ಕೈಂದಾಡಿ ಶಾಖೆಯ ಕಟ್ಟಡದಲ್ಲಿ ದೀಷ್ಣ ಫ್ಯಾನ್ಸಿ ಮತ್ತು ಬ್ಯೂಟಿಪಾರ್ಲರ್ ಮಳಿಗೆಯು ಅ.16ರಂದು ಶುಭಾರಂಭಗೊಂಡಿತು.
ಈ ಮಳಿಗೆಯ ಉದ್ಘಾಟನೆಯನ್ನು ಚೈತ್ರೆಶ್ ಮಲೆತ್ತಿಕಲ್ಲು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನರಿಮೊಗರು ಸಿಎ ಬ್ಯಾಂಕಿನ ಅಧ್ಯಕ್ಷ ಬಾಬು ಶೆಟ್ಟಿ, ಉಪಾಧ್ಯಕ್ಷ ಲತಾ ಮೋಹನ್ ಗೌಡ, ನಿರ್ದೇಶಕಿ ನಾಗಮ್ಮ ತೋಟ, ಪರಮೇಶ್ವರ ಭಂಡಾರಿ, ಶಿವರಾಮ ಪಜಿರೋಡಿ, ಹೊನ್ನಪ್ಪ ಪೂಜಾರಿ ಕೈಂದಾಡಿ, ನರಿಮೊಗರು ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಪಂಚಾಯತ್ ಸದಸ್ಯ ಸುಧೀರ್ ಶೆಟ್ಟಿ, ಸಂಜೀವ ಪೂಜಾರಿ ಕೈಂದಾಡಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ನಳಿನಿ ಇವರು ಶುಭ ಹಾರೈಸಿದರು. ಸಂಸ್ಥೆಯ ಮಾಲಕಿ ಯಕ್ಷಿತಾ ಕೃಷ್ಣ ಅಥಿತಿಗಳನ್ನು ಸ್ವಾಗತಿಸಿ, ವೀರಪ್ಪ ಪೂಜಾರಿ ಕೈಂದಾಡಿ ವಂದಿಸಿದರು.

LEAVE A REPLY

Please enter your comment!
Please enter your name here