ಈಜು ಸ್ಪರ್ಧೆ-ಬೆಥನಿ ಪ್ರೌಢಶಾಲೆಯ ಪ್ರಾಧಿಕ್ಲಾರಾ ಪಿಂಟೋ ಮತ್ತು ಪ್ರತೀಕ್ಷಾ ಎನ್ ಶೆಣೈ ರಾಷ್ಟ್ರೀಯ ಮಟ್ಟಕ್ಕೆ

0

ಪುತ್ತೂರು: ಕರ್ನಾಟಕ ಸರ್ಕಾರಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಬೆಂಗಳೂರಿನ ಬಸವನಗುಡಿ ಆಕ್ವಾಟಿಕ್ ಸೆಂಟರ್ನಲ್ಲಿ ಅ.17 ಮತ್ತು 18 ರಂದು ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಪ್ರಾಧಿ ಕ್ಲಾರಾ ಪಿಂಟೋ 50 ಮೀ, 100 ಮೀ , 200 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ    ,ಮತ್ತು ಪ್ರತೀಕ್ಷಾ ಎನ್ ಶೆಣೈ 50 ಮೀ ಬ್ರೆಸ್ಟ್ಸ್ಟ್ರೋಕ್ ನಲ್ಲಿ  ಚಿನ್ನದ ಪದಕ , 100 ಮೀ ಮತ್ತು 200 ಮೀ ಬ್ರೆಸ್ಟ್ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ರಿಲೇ ತಂಡ ವನ್ನು ಪ್ರತಿನಿಧಿಸಿದ ಪ್ರಾಧಿ ಕ್ಲಾರಾ ಪಿಂಟೋ  4*100 ಮೆಡ್ಲಿ ರಿಲೇ ನಲ್ಲಿ ಬೆಳ್ಳಿ ಪದಕ ಮತ್ತು 4*100 ಫ್ರೀಸ್ಟೈಲ್ ರಿಲೇ ನಲ್ಲಿ ಚಿನ್ನದ ಪದಕ ಪಡೆದಿರುತಾರೆ  .

ಇವರು ಬೆಥನಿ ಹೈಸ್ಕೂಲ್  10 ನೇ ತರಗತಿ ವಿದ್ಯಾರ್ಥಿನಿಯರಾಗಿದ್ದು ಪ್ರಾಧಿ ಕ್ಲಾರಾ ಪಿಂಟೋ ರವರು ಜೋಸೆಫ್ ಲಿಯೋನೆಲ್ ಪಿಂಟೊ ಮತ್ತು ವಾಯ್ಲೆಟ್ ನತಾಲಿಯಾ ಪಿಂಟೊ ದಂಪತಿಗಳ ಪುತ್ರಿ. ಮತ್ತು ಪ್ರತೀಕ್ಷಾ ಎನ್ ಶೆಣೈ ರವರು ಎಂ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮಿ ಶೆಣೈ ದಂಪತಿಗಳ  ಪುತ್ರಿ.

ಇವರು ಪುತ್ತೂರು ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಪುತ್ತೂರು ಆಕ್ವಾಟಿಕ್ ಕ್ಲಬ್ ನಲ್ಲಿ ಪಾರ್ಥ ವಾರಣಾಶಿ ,ದೀಕ್ಷಿತ್, ರೋಹಿತ್ ಮತ್ತು ನಿರೂಪ್ ಅವರಿಂದ ತರಬೇತಿ ಪಡಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here