ಸಂಸ್ಕಾರದ ಪ್ರಾಕ್ಟಿಕಲ್ ಜೀವನದ ತಿಳುವಳಿಕೆಗೆ ಅಗತ್ಯ – ಸಂಪ್ಯ ಪುತ್ತೂರು ದಸರಾ ಮಹೋತ್ಸವದಲ್ಲಿ ಭಾಸ್ಕರ್ ಆಚಾರ್ ಹಿಂದಾರು

0

ಪುತ್ತೂರು: ಮಕ್ಕಳಿಗಾಗಿ ನಾವು ಪರಿವರ್ತನೆ ಆಗುವ ಕಾಲ ಬಂದಿದೆ. ಮಾರ್ಕ್ ಗಳಿಸುವ ಗುರಿಗಿಂತ ಮಕ್ಕಳಿಗೆ ಪ್ರಾಕ್ಟಿಕಲ್ ಜೀವನ ಕಳಿಸಿ ಎಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು ಅವರು ಹೇಳಿದರು.


ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಪುತ್ತೂರು ದಸರಾ ಮಹೋತ್ಸವದ 5 ನೇ ದಿನವಾದ ಅ.19 ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಟ್ಟು ಮತ್ತು ಸಾವಿನ ಮಧ್ಯದಲ್ಕಿ ಸಮಾಜಕ್ಕೆ ಎನು ಮಾಡಿದ್ದೇವೆಯೋ ಅದು ಸದಾ ಕಲಾ ಉಳಿಯುತ್ತದೆ. ಮಹಾಭಾರತ, ರಾಮಾಯಣದ ಕಥೆ ತಿಳಿದು ಕೊಂಡಾಗ ಭವಿಷ್ಯತ್ ನಲ್ಲಿ ಪ್ರಯೋಜನವಾಗುತ್ತದೆ. ಇವತ್ತು ನಾವು ಮಕ್ಕಳಿಗಾಗಿ ಪರಿವರ್ತನೆ ಆಗುವ ಪರಿಸ್ಥಿತಿ ಒದಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಸಂಸ್ಕಾರ ಬಿಟ್ಟು ಜೀವನ ನಡೆಸಬಾರದು.ನಾವು ಮಾಡಿದ ಒಳ್ಳೆಯ ಕೆಲಸವನ್ನು ಸಮಾಜ ಗುರುತಿಸಬೇಕು ಹೊರತು ನಮ್ಮನ್ನು ನಾವೆ ಪ್ರಚಾರಕ್ಕೆ ಒಡ್ಡಬಾರದು ಎಂದ ಅವರು ಮಕ್ಕಳನ್ನು ಪ್ರಾಕ್ಟಿಕಲ್ ಜೀವನ ಕೊಡಿಸಿ ಎಂದರು.

ಸಂಸ್ಕಾರ ವಿನಯಕ್ಕೆ ಶಾಸ್ತ್ರೀಯ ನೃತ್ಯ ಅಗತ್ಯ:
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಅವರು ಮಾತನಾಡಿ ಲಲಿತ ಕಲೆಯನ್ನು ಕಲಿಯುವವರು ಕೇವಲ ವಿದ್ಯೆ ಮಾತ್ರವಲ್ಲ ಉತ್ತಮ ಸಂಸ್ಕಾರ ಸಿಗುತ್ತದೆ. ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಸಂಸ್ಕಾರ ಮಾತ್ರವಲ್ಲದೆ ಬೌಧಿಕ ಮತ್ತು ವಿನಯ ಸಿಗಲಿದೆ ಇದರೊಂದಿಗೆ ಮಕ್ಕಳ ಅಂಕಗಳಿಕೆಯಲ್ಲೂ ನೃತ್ಯ ಮತ್ತು ಸಂಗೀತ ಮೂಲ ಗುರುವಾಗಿದೆ ಎಂದರು.

ಕ್ಷೇತ್ರದಲ್ಲಿ ರಾಜ್ಯದಲ್ಲೇ ಆಗದ ದೇವತಾ ಕಾರ್ಯ ನಡೆದಿದೆ:
ಅಧ್ಯಕ್ಷತೆ ವಹಿಸಿದ ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಅವರು ಮಾತನಾಡಿ ರಾಜ್ಯದಲ್ಲಿ ಆಗದಷ್ಟು ದೇವತಾ ಕಾರ್ಯಕ್ರಮ ಈ ಮಣ್ಣಿನಲ್ಲಿ ನಡೆದಿದೆ. ಈ ಮಣ್ಣಿನಲ್ಲಿನ ಶಕ್ತಿಯಿಂದ ಎಲ್ಲರಿಗೂ ಒಳ್ಳೆಯದಾಗಿದೆ ಎಂದರು. ಪೂರ್ಣಿಮಾ ಪುತ್ತೂರಾಯ ಸ್ವಾಗತಿಸಿದರು. ಶರಣ್ಯ ವಂದಿಸಿದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಆರಂಭದಲ್ಲಿ ಮತ್ತು ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ನೃತ್ಯಾರ್ಪಣೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here