ಅ.23:ಮೈಸೂರು ದಸರೆಯಲ್ಲಿ ನೃತ್ಯೋಪಾಸನಾ ಕಾರ್ಯಕ್ರಮ

0

ಪುತ್ತೂರು:ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ಈ ಬಾರಿ ನವರಾತ್ರಿ ಉತ್ಸವದ ಪ್ರಯುಕ್ತ `ನೃತ್ಯೋಹಂ’ ಭರತನಾಟ್ಯ, ಸಮೂಹ ನೃತ್ಯ ಹಾಗೂ
ನೃತ್ಯರೂಪಕ ಮೈಸೂರಿನ ಜಗತ್ಪçಸಿದ್ಧ ದಸರಾ ಮಹೋತ್ಸವ ಸೇರಿದಂತೆ ನಾಡಿನ ವಿವಿಧ ಕಡೆಗಳಲ್ಲಿ ಅ.20ರಿಂದ 23ರವರೆಗೆ ಏರ್ಪಡಲಿದೆ.

ಮೈಸೂರು ದಸರಾ ಮಹೋತ್ಸವ ಸಲುವಾಗಿ ಗಾನಭಾರತಿ ವೇದಿಕೆಯಲ್ಲಿ ಅ.23ರಂದು ರಾತ್ರಿ 7.30ರಿಂದ ಸಮೂಹ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.ಮೈಸೂರು ದಸರಾ
ಮಹೋತ್ಸವದಲ್ಲಿ ಈ ನೃತ್ಯಕೇಂದ್ರಕ್ಕೆ ಲಭಿಸಿದ ಎರಡನೇ ಕಾರ್ಯಕ್ರಮ ಇದು ಎಂದು ನೃತ್ಯಕೇಂದ್ರದ ನಿರ್ದೇಶಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.20ರಂದು ರಾತ್ರಿ 7.30ರಿಂದ ಆರ್ಯಾಪಿನ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, 21ರಂದು ರಾತ್ರಿ 7.30ರಿಂದ ಕೆಯ್ಯೂರು ಶ್ರೀಮಹಿಷಮರ್ದಿನಿ ದೇವಸ್ಥಾನ, 22ರಂದು ಸಂಜೆ 6ರಿಂದ ಕಾಸರಗೋಡಿನ ಪೆರ್ಲ ನಲ್ಕ ಬಳಿಯ ಶುಳುವಾಲಮೂಲೆ ಶ್ರೀಸದನ ಮನೆಯಲ್ಲಿ ಶರನ್ನವರಾತ್ರಿ ಮಹೋತ್ಸವದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here