ಬಡಗನ್ನೂರುಃ ಪಡುಮಲೆ ಮದಕ ಶ್ರೀ ರಾಜರಾಜೇಶ್ವರಿ ಸಾನಿಧಿಯಲ್ಲಿ ಪ್ರಥಮ ವರ್ಷದ ಶ್ರೀ ಶರನ್ನವರಾತ್ರಿ ಮಹೋತ್ಸವ ಸಂಭ್ರಮ ಅ. 15 ಪ್ರಾರಂಭಗೊಂಡು ಅಶ್ವಯುಜ ಶುದ್ಧ ದಶಮಿ 23 ತನಕ 9 ದಿವಸಗಳ ಕಾಲ ಪರ್ಯಂತ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಅಲಂಕಾರ ಪೂಜೆ,ಹಾಗೂ ಭಜನಾ ಸಂಕೀರ್ತನೆ ನಡೆಯಲಿದ್ದು ಮಹೋತ್ಸವ ಅ.15 ರಂದು ಆರಂಭಗೊಂಡಿತ್ತು.
ಅ. 15 ರಂದು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಿಂದ ಬ್ಯಾಂಡ್ ವಾದ್ಯ ಘೋಷ ಹಾಗೂ ಮಕ್ಕಳ ಕುಣಿತ ಭಜನೆಯೊಂದಿಗೆ ಮೆರವಣಿಗೆ ಮೂಲಕ ಶ್ರೀಮದಕ ರಾಜರಾಜೇಶ್ವರಿ ಸನ್ನಿಧಿಗೆ ತೆರಳಿ ಶ್ರೀ ರಾಜರಾಜೇಶ್ವರಿ ದೇವ ಹೂವಿನ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಪೂಜಾ ವಿಧಿ ವಿಧಾನಗಳು ಗಣೇಶ ಭಟ್ ನೇತೃತ್ವದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಳ್ವ ಗಿರಿಮನೆ,, ಕಾರ್ಯದರ್ಶಿ ಸುಬ್ಬಯ್ಯ ರೈ ಹಲಸಿನಡಿ,, ಕೋಶಾಧಿಕಾರಿ ಶಿವಕುಮಾರ್ ಮೂಂಡೋಳೆ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್, ರೈ ಕಟ್ಟಾವು, ಮಹಿಳಾ ಸಮಿತಿ ಅಧ್ಯಕ್ಷ ಶಂಕರಿ ಪಟ್ಟೆ, ಸಂಚಾಲಕರಾದ ವಾಣಿಶ್ರೀ ಪಡುಮಲೆ, ಉಮಾವತಿ, ಕಟ್ಟಾವು, ಸುಧಾ ಎಸ್ ರೈ ಕಟ್ಟಾವು , ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ, ಸ್ವಯಂ ಕಾರ್ತರಾದ ಸುರೇಶ್ ರೈ ಪಲ್ಲತ್ತಾರು, ರಾಜೇಶ್ ರೈ ಮೇಗಿನಮನೆ, ಪುಷ್ಪರಾಜ ಆಳ್ವ ಗಿರಿಮನೆ, ಸುರಾಜ್ ರೈ ಮೈಂದನಡ್ಕ, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.