ಕಾರುಗಳ ಬಿಡಿಭಾಗ ಮಾರಾಟ ಮಳಿಗೆ ಇಂಡಿಯನ್ ಅಟೋ ಪಾರ್ಟ್ಸ್ ದರ್ಬೆಯಲ್ಲಿ ಶುಭಾರಂಭ

0

ಪುತ್ತೂರು : ಮಾರುತಿ ಸುಝುಕಿ , ಟಾಟಾ , ಮಹೀಂದ್ರ ,ಟೊಯೋಟಾ ,ಹುಂಡೈ ,ಹೊಂಡಾ ಹಾಗೂ ಫೋರ್ಡ್ ಕಾರುಗಳ ಎಲ್ಲಾ ಬಗೆಯ ಬಿಡಿಭಾಗಗಳ ಮಾರಾಟ ಮಳಿಗೆ ಇಂಡಿಯನ್ ಅಟೋ ಸ್ಪೇರ್ ಪಾರ್ಟ್ಸ್ ಅ. 20 ರಂದು ದರ್ಬೆ ಪುಪ್ಪಾಂಜಲಿ ಕಲಾ ಮಂದಿರ ಬಳಿಯ ಹನುಮಾನ್ ಬಿಲ್ಡಿಂಗ್ ನೆಲ ಮಹಡಿಯಲ್ಲಿ ಶುಭಾರಂಭಗೊಂಡಿತು.


ಪುತ್ತೂರಿನ ಕೇಂದ್ರ ಜುಮ್ಮಾ ಮಸೀದಿಯ ಧರ್ಮ ಗುರು ಅಸಯ್ಯದ್ ಆಹ್ಮದ್ ಪೂಕೋಯ ತಂಙಳ್ ನೂತನ ಮಳಿಗೆಯ ಉದ್ಘಾಟನೆ ನೆರವೇರಿಸಿ , ದುವಾಃ ಆಶೀರ್ವಚನ ನೀಡಿ , ಉತ್ತಮ ರೀತಿಯ ಸೇವೆಯನ್ನು ಗ್ರಾಹಕ ವರ್ಗಕ್ಕೆ ಅತೀ ಪ್ರಾಮಾಣಿಕ ರೀತಿಯಲ್ಲಿ ಒದಗಿಸುವ ಮೂಲಕ ಅಭಿವೃದ್ಧಿ ಹಾದಿಯಲ್ಲಿ ಸಾಗಲಿಯೆಂದೂ ಹೇಳಿ , ಹಾರೈಸಿದರು.
ಪುತ್ತೂರು -ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ ,ಖಲಂದರ್ ಕೆಕನಾಜೆ ,ಹಮೀದ್ ಕೊಮ್ಮೆಮಾರ್ ,ರಝಾಲ್ ನೆಕ್ಕಿಲು , ಸಂಕೀರ್ಣ ಮಾಲೀಕ ಅಬ್ದುಲ್ ಹಮೀದ್ , ಚಿನ್ಮಯ ವೆಜೀಟೆಬಲ್ಸ್ ಮಾಲೀಕ ಹರೀಶ್ ಹಾಗೂ ಅಬ್ದುಲ್ಲಾ ದರ್ಬೆ ಸಹಿತ ಹಲವಾರು ಅತಿಥಿಗಳು ಹಾಜರಿದ್ದರು.ಸಮೀರ್ ರೆಂಜ ಹಾಗೂ ಸಿಬಂದಿ ಕಿರಣ್ ತಿಂಗಳಾಡಿ ಸಹಕಾರ ನೀಡಿದರು.


ಮಾಲೀಕ ಅಬ್ದುಲ್ ರಹಿಮಾನ್ ನೇರಳ್ತಡ್ಕ ಸ್ವಾಗತಿಸಿ ,ಮಾತನಾಡಿ ,ಬಿಡಿಭಾಗಗಳ ಮಾರಾಟದಲ್ಲಿ ಹನ್ನೆರಡು ವರುಷಗಳಿಗೂ ಮಿಕ್ಕಿ ಅನುಭವ ಹೊಂದಿರುವಂತಹ ಜೊತೆಗೆ ಸ್ಪರ್ಧಾತ್ಮಕ ಬೆಲೆಯೊಂದಿಗೆ ಹಲವು ಪ್ರಮುಖ ಕಂಪೆನಿ ಕಾರುಗಳ ಬಿಡಿಭಾಗಗಳೆಲ್ಲಾ ಈ ನೂತನ ಮಳಿಗೆಯಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ.
ಫೋನ್ ಕರೆ ಮೂಲಕ ಆರ್ಡರ್ ನೀಡೋ ಗ್ರಾಹಕರಿಗೆ ಡೋರ್ ಡೆಲಿವರಿ ವ್ಯವಸ್ಥೆಯೂ ಸಂಸ್ಥೆಯಿಂದ ತ್ವರಿತ ರೀತಿಯಲ್ಲಿ ಸಿಗಲಿದೆಯೆಂದೂ ಮಾಲೀಕರು ತಿಳಿಸಿ , ವಂದಿಸಿ , ಗ್ರಾಹಕರೆಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.

LEAVE A REPLY

Please enter your comment!
Please enter your name here