ಪುತ್ತೂರು: 32ನೇ ಬಾರಿ ರಕ್ತದಾನ ಮಾಡಿದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಅವರನ್ನು ರೋಟರಿ ಮನಿಷಾ ಹಾಲ್‌ನಲ್ಲಿ ನಡೆದ ಮರ್ಹೂಂ ಅಬ್ದುಲ್ ಅಝೀಝ್ ಸ್ಮರಣಾರ್ಥ ನಡೆದ ಸಾರ್ವಜನಿಕ ರಕ್ತದಾನ ಶಿಬಿರದಲ್ಲಿ ಸನ್ಮಾನಿಸಲಾಯಿತು. ಸಿದ್ದೀಕ್ ಸುಲ್ತಾನ್ ಅವರು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಅನೇಕ ಬಾರಿ ರಕ್ತದಾನ ಮಾಡುವ ಮೂಲಕ ಇವರು ಮಾದರಿಯಾಗಿದ್ದಾರೆ. ಇವರು ಕೂಡುರಸ್ತೆ ಬಾಲಾಯ ದಿ.ಹಸೈನಾರ್ ಮತ್ತು ರುಖಿಯಾ ದಂಪತಿಗಳ ಪುತ್ರ.
ಸನ್ಮಾನ ಕಾರ್ಯಕ್ರಮ ಸಂದರ್ಭದಲ್ಲಿ ಬಲ್ನಾಡು ಜುಮಾ ಮಸೀದಿ ಗೌರವಾಧ್ಯಕ್ಷ ಮುಝಮ್ಮಿಲ್ ತಂಙಳ್, ಪುತ್ತೂರು ಅಕ್ರಮ-ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಯುವ ಉದ್ಯಮಿ ಶರೀಫ್ ಬಲ್ನಾಡ್, ಎ.ಜೆ ಆಸ್ಪತ್ರೆಯ ಬ್ಲಡ್ ವಿಭಾಗದ ಕಾರ್ಯನಿರ್ವಣಾಧಿಕಾರಿ ಗೋಪಾಲಕೃಷ್ಣ, ಅಬ್ದುಲ್ ರಹಿಮಾನ್ ಬಲ್ನಾಡ್, ರಫೀಕ್ ಬಲ್ನಾಡ್, ಹಾರಿಸ್ ಬಲ್ನಾಡ್, ಹುಸೈನ್ ಮದನಿ, ನಿಯಾಝ್ ದಾರಿಮಿ, ಅಲಿ ಪರ್ಲಡ್ಕ, ಇಫಾಝ್ ಬನ್ನೂರು, ಬಪ್ಪಳಿಗೆ ಖತೀಬ್ ಮುಹಮ್ಮದ್ ಶಾಫಿ ಮೌಲವಿ, ಬಲ್ನಾಡು ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ನಾಟೆಕಲ್ಲು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.